ನಗ್ರಿ–ಮಿತ್ತಮಜಲು ₹1.3 ಕೋಟಿ ವೆಚ್ಚದ ಹೊಸ ಕಾಂಕ್ರೀಟ್ ರಸ್ತೆ ಸಂಚಾರಕ್ಕೆ ಮುಕ್ತ

ಶ್ರೀ ಶಾರದಾ ಭಜನಾ ಮಂದಿರ ನಗ್ರಿ ಇಲ್ಲಿಂದ ಶ್ರೀ ಮಿತ್ತಮಜಲು ಕ್ಷೇತ್ರದ ರಸ್ತೆಗೆ ಸಂಪರ್ಕ ಕಲ್ಪಿಸುವ ಸುಮಾರು 1.3 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಹೊಸ ಕಾಂಕ್ರೀಟ್ ರಸ್ತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸ್ಥಳೀಯರೊಂದಿಗೆ ವೀಕ್ಷಣೆ ನಡೆಸಿದ ಬಳಿಕ ಸಾರ್ವಜನಿಕರಿಗೆ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಅವರು,ಮೂಲಭೂತ ಸೌಕರ್ಯಗಳ ಪಟ್ಟಿಯಲ್ಲಿ ರಸ್ತೆ ಸಂಪರ್ಕವೂ ಒಂದಾಗಿದ್ದು, ಗ್ರಾಮದ ಮೂಲೆಮೂಲೆಗಳಿಗೆ ಸುಸಜ್ಜಿತವಾದ ರಸ್ತೆಯ ನಿರ್ಮಾಣ ಮಾಡಿ ಸಂಪರ್ಕ ಕಲ್ಪಿಸಿದರೆ ಗ್ರಾಮದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.

ಪುದ್ದಾರ್ ಮೆಚ್ಚಿ ಜಾತ್ರೆಯು ದಿನಾಂಕ 14, ಬುಧವಾರ ರಾತ್ರಿ ಉಳ್ಳಾಲ್ತಿ ಮೆಚ್ಚಿನೊಂದಿಗೆ ಪ್ರಾರಂಭವಾಗಿ ದಿನಾಂಕ 15, ಗುರುವಾರ ಬೆಳಗ್ಗೆ 10.30 ಕ್ಕೆ ದೈಯ್ಯಂಗುಲು ನೇಮೋತ್ಸವ ಹಾಗೂ ರಾತ್ರಿ ನಾಲ್ಕೆತ್ತಾಯ ದೈವದ ಮೆಚ್ಚಿಮೂಲಕ ನಡೆಯಲಿದೆ. ಹಾಗಾಗಿ ಭಕ್ತರಿಗೆ ಬರಲು ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆ ಯನ್ನು ಸಾರ್ವಜನಿಕರ ಸಂಚಾರಕ್ಕೆ ಬಿಟ್ಟು ಕೊಡಲಾಗಿದೆ ಎಂದು ನಗ್ರಿಗುತ್ತು ವಿವೇಕ್ ಶೆಟ್ಟಿ ತಿಳಿಸಿದ್ದಾರೆ.


ಈ ಸಂದರ್ಭದಲ್ಲಿ ಶ್ರೀಕಾಂತ್ ಶೆಟ್ಟಿ ಸಜೀಪ, ಸಜೀಪ ಮೂಡ ಗ್ರಾ.ಪಂ.ಮಾಜಿ ಅಧ್ಯಕ್ಷ ಶೋಬಿತ್ ಪೂಂಜ, ಜಿ.ಪಂ.ಮಾಜಿ ಸದಸ್ಯ ರವೀಂದ್ರ ಕಂಬಳಿ, ಗಡಿಪ್ರಧಾನರಾದ ಕಾಂತಾಡಿಗುತ್ತು ಉಗ್ಗ ಶೆಟ್ಟಿ ಯಾನೆ ಗಣೇಶ್ ನಾಯ್ಕ್, ತಂತ್ರಿ ಸುಬ್ರಹ್ಮಣ್ಯ ಭಟ್,ನಗ್ರಿ ಗುತ್ತು ಜಯರಾಮ ಶೆಟ್ಟಿ,ಸಜೀಪ ಮೂಡ ಹಾಗೂ ಸಜೀಪ ಮುನ್ನೂರು ಗ್ರಾ.ಪ.ಂ.ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸದಸ್ಯರುಗಳು,ಗ್ರಾಮದ ಗಣ್ಯರಯ,ಪ್ರಮುಖರು ಹಾಗೂ ನಾಗರೀಕರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!