ಗಡಿನಾಡು ಕನ್ನಡ ಸಮ್ಮೇಳನ ಯಶಸ್ಸಿಗೆ ಗಣಪತಿ ಯಾಗ

ಕಾಸರಗೋಡು: ದಿನಾಂಕ 26-07-2026 ಭಾನುವಾರ ನಡೆಯಲಿರುವ ‘ಕರ್ನಾಟಕ-ಗಡಿನಾಡು ಕನ್ನಡ ಸಮ್ಮೇಳನ’ದ ಯಶಸ್ಸಿಗೆ ಭಗವದನುಗ್ರಹ ಸಿಗಲೆಂದು ಹಾಗೂ ಕನ್ನಡ ಭವನ ಗ್ರಂಥಾಲಯದಲ್ಲಿ ನೂತನವಾಗಿ ನಿರ್ಮಿಸಲಾದ ಉಚಿತ ವಸತಿ ಸೌಕರ್ಯದ ಕೊಠಡಿಗಳ ಸಮರ್ಪಣೆ ಪ್ರಯುಕ್ತ ಶನಿವಾರ ಶ್ರೀ ಗಣಪತಿ ಯಾಗ ಹಾಗೂ ವಿಶೇಷ ಪ್ರಾರ್ಥನಾ ಕಾರ್ಯಕ್ರಮ ಜರುಗಿತು.

ಸಮ್ಮೇಳನವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸುವ ನಿಟ್ಟಿನಲ್ಲಿ ಯಾಗವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಸಾಂಗತ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಸಮ್ಮೇಳನ ಸಮಿತಿಯ ಅಧ್ಯಕ್ಷರಾದ ಡಾ. ಕೆ.ಎನ್. ವೆಂಕಟರಮಣ ಹೊಳ್ಳ, ಸಂಘಟನಾ ಕಾರ್ಯದರ್ಶಿಗಳಾದ ಪ್ರದೀಪ್ ನಾಯ್ಕ್ ಮತ್ತು ಲೋಕೇಶ್ ಶೆಟ್ಟಿ, ಕಾರ್ಯದರ್ಶಿ ವಸಂತ್ ಕೆರೆಮನೆ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಹಾಗೂ ಕನ್ನಡಿಗರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!