ಮಂಗಳೂರು: ಕಾಂಗ್ರೆಸ್ ಸಂವಿಧಾನಕ್ಕೆ ಅಗೌರವವನ್ನು ತೋರಿಸುವ ರೀತಿಯಲ್ಲಿ ಮೊನ್ನೆಯ ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲರನ್ನು ಅಗೌರವಿಸಿದ್ದಾರೆ ಎಂದು ವಿಧಾನ ಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು .
ಬರೀ ಬಾಯಿ ಮಾತಿನಲ್ಲಿ ಮಾತ್ರ ಸಂವಿಧಾನಕ್ಕೆ ಕಾಂಗ್ರೆಸಿಗರು ಗೌರವವನ್ನು ನೀಡುತ್ತಾರೆ . ಆದರೆ ಅದರ ಆಶಯಗಳಿಗೆ ಅವರು ಬದ್ದರಾಗುವುದಿಲ್ಲ . ರಾಜ್ಯಪಾಲರ ಮೇಲೆ ಸುಳ್ಳು ಆಪಾಧನೆಯನ್ನು ಅವರು ಮಾಡ್ತಾ ಇದ್ದಾರೆ . ಈ ಜಂಟಿ ಅಧಿವೇಶವನ್ನೇ ಕರೆದಿರುವುದೇ ರಾಜ್ಯಪಾಲರನ್ನು ಅಗೌರವಿಸಲು ಎಂದು ಅವರು ಹೇಳಿದರು .ವರ್ಷದ ಆರಂಭದಲ್ಲಿ ಜಂಟಿ ಅಧಿವೇಶವನ್ನು ನಡೆಸಿ ಅವರಿಗೆ ಅಧಿವೇಶನಕ್ಕೆ ಆಹ್ವಾನವನ್ನು ನೀಡಿ ಕೇಂದ್ರ ಸರಕಾರದ ವಿರುದ್ಧ ಟೀಕೆಯನ್ನು ಒಳಗೊಂಡ ೨ ರಿಂದ ೧೨ ಪ್ಯಾರಾದ ಜೊತೆಗೆ ಇತರೇ ಅಂಶಗಳನ್ನು ಒಳಗೊಂಡ ವಿಷಯವನ್ನು ಓದುವಂತೆ ಭಾಷಣವನ್ನು ಸಿದ್ಧ ಪಡಿಸುತ್ತಾರೆ. ಆದರೆ ರಾಜ್ಯಪಾಲರು ಟೀಕೆಯ ಪ್ಯಾರಾವನ್ನು ಬಿಟ್ಟು ಉಳಿದ ವಿಷಯವನ್ನು ಓದುತ್ತಾರೆ ಇದು ಕಾಂಗ್ರೆಸ್ ನಾಯಕರಿಗೆ ಹಿಡಿಸುವುದಿಲ್ಲ.
ರಾಜ್ಯಪಾಲರು ಮುಖ್ಯ ಅಂಶಗಳನ್ನು ಭಾಷಣ ಮಾಡಿ ನಿರ್ಗಮಿಸಿದ್ದಾರೆ . ಹೀಗಿರುವಾಗ ಕಾಂಗ್ರೆಸ್ ನಾಯಕರು ರಾಜ್ಯಪಾಲರು ಭಾಷಣವನ್ನು ಮಾಡಿಲ್ಲ ಎಂದು ಹೇಗೆ ಹೇಳಲು ಸಾಧ್ಯ ಎಂದು ಪ್ರಶ್ನೆ ಮಾಡಿದರು.ರಾಜ್ಯಪಾಲರು ಸಂಪೂರ್ಣ ಭಾಷಣವನ್ನು ಮಾಡಬೇಕ್ಕೆಂದಿಲ್ಲ ಎಂದು ಸುಪ್ರೀಂ ಕೋರ್ಟ್ ಮತ್ತು ಹೈ ಕೋರ್ಟ್ ಈ ಹಿಂದೆಯೇ ತಿಳಿಸಿದೆ ಎಂದರು.
ಈಗಿನ ನರೇಗಾ ತಿದ್ದು ಮಾಡಿ ತಂದಂತಹ ವಿಬಿ ಜಿ ರಾಮ್ ಜಿ ಮಸೂದೆಯನ್ನು ರಾಮ್ ಜಿ ಎಂದು ಬರೆಯದೆ ಗ್ರಾಮ್ ಜಿ ಎಂದೇ ಬರೆದ್ದಿದಾರೆ . ಎರಡೂ ಪಾರ್ಲಿಮೆಂಟ್ ನಲ್ಲೂ ಪಾಸ್ ಆಗಿ ರಾಷ್ಟ್ರ ಪತಿಯವರ ಅಂಕಿತವನ್ನು ಪಡೆದ ಮಸೂದೆಯನ್ನು ವಿರೋಧಿಸುವ ಭಾಷಣವನ್ನು ರಾಜ್ಯ ಪಾಲರ ಮೂಲಕ ಮಾಡಿಸುವ ರಾಜಕೀಯ ಪ್ರಯತ್ನ ಕಾಂಗ್ರೆಸ್ ಜಂಟಿ ಅಧಿವೇಶನದಲ್ಲಿ ಮಾಡಿತ್ತು ಆದರೆ ಅದು ವಿಫಲವಾಗಿದೆ ಎಂದರು .
ಬಿ ಕೆ ಹರಿಪ್ರಸಾದರ ವಿರುದ್ಧ ಕಿಡಿ
ಬಿ ಕೆ ಹರಿಪ್ರಸಾದವರು ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಹುದ್ದೆಯಲ್ಲಿದ್ದವರು . ಇಂಥಹಾ ಅನುಭವಿ ನಾಯಕ ರಾಜ್ಯಪಾಲರ ಮುಂದೆ ಗೂಂಡಾರೀತಿಯಲ್ಲಿ ನಡೆದುಕೊಂಡಿದ್ದಾರೆ . ರಾಜ್ಯಪಾಲರ ವಿರುದ್ಧ ಬೆರಳು ತೋರಿಸಿ ಅವರನ್ನು ಹೊಡೆಯಲು ಹೋದ ರೀತಿಯಲ್ಲಿ ಮುನ್ನುಗ್ಗಿದ್ದಾರೆ . ಒಂದು ವೇಳೆ ಅಲ್ಲಿ ಸಿಬ್ಬಂದಿಗಳು ಇಲ್ಲದೆ ಇರುತ್ತಿದ್ದರೆ ಅಲ್ಲಿ ಏನೂ ಬೇಕಾದರೂ ಸಂಭವಿಸುತ್ತಿತ್ತು ಎಂದು ಅವರು ಹೇಳಿದರು .
ಈ ಘಟನೆ ನಡೆದರೂ ಅದನ್ನು ಸಮರ್ಥನೆ ಮಾಡುಲು ಮುಂದಾಗುತ್ತಾ ಇದ್ದಾರೆ . ಕಾಂಗ್ರೆಸ್ಗೆ ಸಂವಿಧಾನದ ಮೇಲೆ ಆಗಲಿ , ರಾಜ್ಯ ಪಾಲರ ಮೇಲೆ ಗೌರವ ಇಲ್ಲ . ವಿಧಾನ ಸಾವಿಧಾನದಲ್ಲೂ ಈ ಬಗ್ಗೆ ಚರ್ಚೆ ನಡೆಯುವಾಗ ಅಲ್ಲಿ ಸದ್ದು ಗದ್ದಲ ವಾಗಿದೆ . ಬಿ ಕೆ ಹರಿಪ್ರಸಾದ್ ರಾಜ್ಯಪಾಲರನ್ನು ಗೋ ಬ್ಯಾಕ್ ಎಂದು ಹೇಳಿರುವುದು ಅಗೌರವಾಗಿದೆ . ಇದನ್ನು ನಾವು ಖಂಡನೆ ಮಾಡುತ್ತೇವೆ ಎಂದರು .
ಮುಖ್ಯ ಮಂತ್ರಿಗಳು ರಾಜ್ಯಪಾಲರ ನಡೆಯನ್ನು ಪ್ರಶ್ನೆ ಮಾಡುತ್ತಾರೆ ಆದರೆ ಇವರು ವಿರೋಧ ಪಕ್ಶದ ನಾಯಕರಾಗಿ ಇದ್ದ ಸಮಯದಲ್ಲಿ ನಡೆದುಕೊಂಡ ನಡವಳಿಕೆ ಸರಿ ಇತ್ತೇ ಎಂದು ಪ್ರಶ್ನೆ ಮಾಡಿದರು . ಈ ರೀತಿಯಾಗಿ ಮಾಡಿದ್ದು ತಪ್ಪು ಎಂದು ಹೇಳುವ ಮುಖ್ಯ ಮಂತ್ರಿಗಳು ರಾಜ್ಯ ಪಾಲರ ವಿರುದ್ಧ ಕೋರ್ಟ್ ಗೆ ಹೋಗುವುದಾಗಿ ಹೇಳಿದ್ದಾರೆ .
ನಿಮಗೆ ಧೈರ್ಯ ತಾಕತ್ತು ಇದ್ದರೆ ರಾಜ್ಯಪಾಲರ ನಡೆಯನ್ನು ಪ್ರಶ್ನೆ ಮಾಡಲು ಕೋರ್ಟ್ ಗೆ ಹೋಗಿ ಎಂದು ಅವರು ತಿಳಿಸಿದರು .
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಶಾಸಕರಾದ ಕಿಶೋರ್ ಕುಮಾರ್ ಪುತ್ತೂರು , ಬಿಜೆಪಿ ನಾಯಕರಾದ ರಾಜಗೋಪಾಲ್ ರೈ , ರವೀಂದ್ರ ಶೆಟ್ಟಿ , ವಸಂತ ಪೂಜಾರಿ ಸಹಿತ ಇನ್ನಿತ್ತರು ಉಪಸ್ಥಿತರಿದ್ದರು .