ಮಂಜೇಶ್ವರ : ಪೈವಳಿಕೆಯಲ್ಲಿ ಮನೆ ಸಮೀಪದ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಸಾವನ್ನಪ್ಪಿದ್ದಾನೆ.
ಮೂಲತಃ ಕೊಚ್ಚಿ ಆಲುವಾ ನಿವಾಸಿ ಹಾಗೂ ಕಳೆದ 20 ವರ್ಷಗಳಿಂದ ಪೈವಳಿಕೆ ಮರಿಕೆಯಲ್ಲಿ ವಾಸಿಸುತ್ತಿದ್ದ ಬಾಬು ಕೆ.ಯು (46) ಸಾವನ್ನಪ್ಪಿದ ದುರ್ದೈವಿ. ಈ ಹಿಂದೆ ಟೈಲ್ಸ್ ಹಾಸುವ ಕೆಲಸ ಮಾಡುತ್ತಿದ್ದ ಈತ ಬಳಿಕ ಪೈವಳಿಕೆ ಪಂಚಾಯತ್‌ನ ಉದ್ಯೋಗ ಖಾತರಿ ಯೋಜನೆಯಲ್ಲಿ ಕಾರ್ಮಿಕನಾಗಿದ್ದಾನೆನ್ನಲಾಗಿದೆ.
ಈ ತಿಂಗಳ 19ರಂದು ಸಂಜೆ ಪತ್ನಿ ಮನೆಗೆ ಬಂದಾಗ ಕಾಣೆಯಾಗಿದ್ದ ಬಾಬು, ಬಳಿಕ ಮನೆಯ ಬಳಿಯ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂಧಿಸಿದ ಹಿನ್ನೆಲೆಯಲ್ಲಿ ಸಾವು ಸಂಭವಿಸಿದೆ.