ತಾಯಿ ಮತ್ತು ಶಿಶು ಆರೋಗ್ಯ ಜಾಗೃತಿ ಕಾರ್ಯಕ್ರಮ

ರೋಟರಿ ಕ್ಲಬ್ ನಿಟ್ಟೆ, ವಲಯ–5, ರೋಟರಿ ಜಿಲ್ಲೆ–3182 ವತಿಯಿಂದ 2026ರ ಜುಲೈ 30ರಂದು ನಿಟ್ಟೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಾಯಿ ಮತ್ತು ಶಿಶು ಆರೋಗ್ಯ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಡಾ. ಹರೀಶ್ ಆಚಾರ್ಯ, ವೈದ್ಯಾಧಿಕಾರಿಗಳು, ಸಮುದಾಯ ಆರೋಗ್ಯ ಕೇಂದ್ರ, ನಿಟ್ಟೆ ಅವರು ಗರ್ಭಿಣಿಯರು ನಿಯಮಿತ ಗರ್ಭಪೂರ್ವ ತಪಾಸಣೆ (ANC), ಪೌಷ್ಟಿಕ ಆಹಾರ, ಸುರಕ್ಷಿತ ಹೆರಿಗೆ, ಹೆರಿಗೆಯ ನಂತರದ ಆರೈಕೆ ಹಾಗೂ ನವಜಾತ ಶಿಶುಗಳಿಗೆ ಮೊದಲ ಆರು ತಿಂಗಳು ತಾಯಿಯ ಎದೆಹಾಲಿನ ಮಹತ್ವದ ಕುರಿತು ಸಮಗ್ರ ಮಾಹಿತಿ ನೀಡಿದರು. ಅಲ್ಲದೆ ಅಧಿಕ ಅಪಾಯದ ಗರ್ಭಧಾರಣೆ (High Risk Pregnancy), ಅಗತ್ಯ ವೈದ್ಯಕೀಯ ಪರೀಕ್ಷೆಗಳು, ಲಸಿಕೆಗಳು ಹಾಗೂ ತಾಯಿ ಮತ್ತು ಶಿಶುಗಳ ಆರೋಗ್ಯ ರಕ್ಷಣೆಗೆ ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳ ಬಗ್ಗೆ ವಿವರಿಸಿದರು.

ಡಾ. ಹರೀಶ್ ಆಚಾರ್ಯ ಅವರು ಕುಟುಂಬ ಕಲ್ಯಾಣ, ಮಕ್ಕಳ ನಡುವಿನ ಸೂಕ್ತ ಅಂತರ (Birth Spacing), ಸಂತಾನೋತ್ಪತ್ತಿ ಮತ್ತು ಶಿಶು ಆರೋಗ್ಯ (RCH) ಸೇವೆಗಳ ಸದುಪಯೋಗ ಹಾಗೂ ಆರೋಗ್ಯಕರ ಜೀವನಶೈಲಿಯ ಅಗತ್ಯವನ್ನು ಒತ್ತಿಹೇಳಿದರು. ಕಾರ್ಯಕ್ರಮದ ಕೊನೆಯಲ್ಲಿ ನಡೆದ ಸಂವಾದಾತ್ಮಕ ಪ್ರಶ್ನೋತ್ತರದಲ್ಲಿ ಭಾಗವಹಿಸಿದವರ ಸಂದೇಹಗಳಿಗೆ ಸಮಗ್ರ ಉತ್ತರ ನೀಡಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು, ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು, ಬಾಣಂತಿಯರು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!