ಮಿಯಪದವು :ಮೋದಿ ಆಡಳಿತದಲ್ಲಿ ದೇಶದ ಪ್ರಗತಿ ಇಂದು ಲೋಕಕ್ಕೆ ಮಾದರಿ, ಕೇರಳದಲ್ಲಿಯೂ ಇಂದು ಬಿಜೆಪಿ ಪ್ರಬಲ ಶಕ್ತಿ, ಗ್ರಾಮ ಗ್ರಾಮ ಗಳಲ್ಲಿ ಬಿಜೆಪಿ ಜನಸಾಮಾನ್ಯರಿಗೆ ಅನಿವಾರ್ಯ, ಕೇಂದ್ರ ಯೋಜನೆಗಳು ಇಂದು ಪ್ರತಿ ಫಲನುಭವಿ ಗಳ ಮನೆಮನೆಗಳಿಗೆ ತಲುಪುತ್ತಿದೆ.

ಆದರೆ ಕೇರಳ ಪಿನರಾಯಿ ಸರಕಾರ ಅವಾಸ್ ಯೋಜನೆ, ಅಯುಷ್ಮಾನ್ ಯೋಜನೆ, ಕೃಷಿ ಸಮ್ಮಾನ್ ಯೋಜನೆ, ಸರ್ವಶಿಕ್ಷ ಅಭಿಯಾನ ಗಳನ್ನು ಬುಡಮೇಲೂ ಗೊಳಿಸುತಿದೆ ಹಾಗೂ ಅನೇಕ ಯೋಜನೆಗಳನ್ನು ಹೆಸರು ಬದಲಾಯಿಸಿ ತನ್ನ ಯೋಜನೆ ಎಂಬತ್ತೆ ಬಿಂಬಿಸುತಿದೆ. ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಹೇಳಿದರು, ಮೀoಜ ಪಂಚಾಯತ್ ಮಟ್ಟದ ಬಿಜೆಪಿ ಕಾರ್ಯಕರ್ತರ ಕಾರ್ಯಾಗಾರ ಮಿಯಪದವುನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಥಳೀಯ ಪಂಚಾಯತ್ ನಲ್ಲಿ ಎಡರಂಗ -ಮುಸ್ಲಿಂ ಲೀಗ್ ಸಿದ್ದಂತ ಬಿಟ್ಟು ಆಡಳಿತ ಮಾಡುತ್ತಿದೆ ಮಿಂಜ, ವರ್ಕಾಡಿ ಹಾಗೂ ಬ್ಲಾಕ್ ಪಂಚಾಯತ್ ಕಳೆದ 5ವರ್ಷದ ಆಡಳಿತ ಇದಕ್ಕೆ ಉದಾಹರಣೆ ಎಂದು ಹೇಳಿದರು.
ಜಿಲ್ಲಾ ಅಧ್ಯಕ್ಷ ಅಶ್ವಿನಿ ಉಪಸ್ಥಿತಿ ಇದ್ದರು.

ಜಿಲ್ಲಾ ಉಪಾಧ್ಯಕ್ಷ ಮುರಳಿಧರ ಯಾದವ್, ಹರೀಶ್ ನಾರಂಪಾಡಿ ಕಾರ್ಯಾಗಾರ ನಡೆಸಿ ಕೊಟ್ಟರು, ಚಂದ್ರಹಾಸ ಶೆಟ್ಟಿ ಬೇಜ್ಜ ಅಧ್ಯಕ್ಷತೆ ವಹಿಸಿದ್ದರು, ಮುಖಂಡರಾದ ಕೆ ವಿ ಭಟ್, ಯತೀರಾಜ್ ಶೆಟ್ಟಿ ಶಾಲಿನಿ ಶೆಟ್ಟಿ, ಆಶಾಲತಾ ಬಿ ಎಂ, ak ಕಯ್ಯರ್, ಶೇಖರ ಕೊಡಿ, ಗಣೇಶ್ ಭಟ್ ವಾರಾಣಸಿ, ನಾರಾಯಣ ತುoಗ, ಜಯರಾಮ್ ಕುಳೂರು, ಗಂಗಾಧರ್ ದಡ್ಡoಗಡಿ ನೇತೃತ್ವ ನೀಡಿದರು, ನಾರಾಯಣ ನಾಯ್ಕ್ ಸ್ವಾಗತಿಸಿ, ಮಂಜುನಾಥ್ ಭಂಡಾರಿ ಧನ್ಯವಾದ ನೀಡಿದರು.


