ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ’ದ ರಾಜ್ಯ ಮಾಧ್ಯಮ ವಕ್ತಾರರಾಗಿ ಸುದೇಶ್ ಕುಮಾರ್ ಮಂಗಳೂರು ಆಯ್ಕೆ

ಮಂಗಳೂರು: ಕನ್ನಡ ನಾಡು–ನುಡಿ ಹಾಗೂ ಕನ್ನಡ ಶಿಕ್ಷಣದ ಉಳಿವಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ *‘ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ’*ದ ರಾಜ್ಯ ಮಾಧ್ಯಮ ವಕ್ತಾರರಾಗಿ ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಸುದೇಶ್ ಕುಮಾರ್ ಮಂಗಳೂರು ಅವರನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ.

ಕನ್ನಡ ಮಾಧ್ಯಮ ಶಾಲೆಗಳ ಸಬಲೀಕರಣ ಮತ್ತು ಸರ್ಕಾರಿ ಶಾಲೆಗಳ ಹಿತಸಂರಕ್ಷಣೆಯ ಉದ್ದೇಶದಿಂದ ರಾಜ್ಯಾದ್ಯಂತ ನಡೆಯುತ್ತಿರುವ ಈ ಮಹತ್ವದ ಅಭಿಯಾನಕ್ಕೆ ಮಾಧ್ಯಮಗಳ ಸಮರ್ಪಕ ಸಹಕಾರ ಹಾಗೂ ಪರಿಣಾಮಕಾರಿ ಸಂವಹನ ಅಗತ್ಯವಿದ್ದು, ಸುದೇಶ್ ಕುಮಾರ್ ಅವರ ದಶಕಗಳ ಪತ್ರಿಕೋದ್ಯಮ ಅನುಭವ ಈ ಅಭಿಯಾನಕ್ಕೆ ಆನೆಬಲವಾಗಲಿದೆ.

ಪತ್ರಿಕೋದ್ಯಮ ಕ್ಷೇತ್ರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿರುವ ಸುದೇಶ್ ಕುಮಾರ್ ಅವರು ಸಮಾಜಮುಖಿ ಹಾಗೂ ಕನ್ನಡಪರ ಕಳಕಳಿಯ ಬರಹಗಳ ಮೂಲಕ ವಿಶಿಷ್ಟ ಗುರುತನ್ನು ಹೊಂದಿದ್ದಾರೆ. ಇನ್ನು ಮುಂದೆ ಅವರು ಅಭಿಯಾನದ ಅಧಿಕೃತ ಮಾಹಿತಿ, ಉದ್ದೇಶಗಳು ಹಾಗೂ ಮುಂದಿನ ಯೋಜನೆಗಳನ್ನು ಮಾಧ್ಯಮಗಳಿಗೆ ತಲುಪಿಸುವ ಪ್ರಮುಖ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಹೊಂದಿರುವ ಅವರ ಸಂಘಟನಾ ಚತುರತೆ, ಅಭಿಯಾನವನ್ನು ರಾಜ್ಯದ ಮೂಲೆಮೂಲೆಯವರೆಗೂ ತಲುಪಿಸಲು ಸಹಕಾರಿಯಾಗಲಿದೆ ಎಂದು ಅಭಿಯಾನದ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ಕನ್ನಡ ಶಾಲೆಗಳು ನಮ್ಮ ಸಂಸ್ಕೃತಿಯ ತಾಯಿಬೇರುಗಳು. ಈ ಅಭಿಯಾನದ ಮೂಲಕ ಕನ್ನಡ ಶಾಲೆಗಳ ಪುನಶ್ಚೇತನಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ,” ಎಂದು ಸುದೇಶ್ ಕುಮಾರ್ ಈ ಸಂದರ್ಭ ಹೇಳಿದ್ದಾರೆ.

ಅಭಿಯಾನದ ರಾಜ್ಯ ಪದಾಧಿಕಾರಿಗಳು ಹಾಗೂ ಕನ್ನಡಾಭಿಮಾನಿಗಳು ಈ ನೇಮಕಕ್ಕೆ ಹರ್ಷ ವ್ಯಕ್ತಪಡಿಸಿ, ಸುದೇಶ್ ಕುಮಾರ್ ಅವರ ಮುಂದಿನ ಸಮಾಜಮುಖಿ ಕಾರ್ಯಕ್ಕೆ ಶುಭಾಶಯಗಳನ್ನು ಕೋರಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!