ಪದ್ಮಶ್ರೀ ಹರೇಕಳ ಹಾಜಬ್ಬ ಅವರ ಪರಿಶ್ರಮದಿಂದ ನೂತನವಾಗಿ ಆರಂಭಗೊಂಡಿರುವ ಹರೇಕಳ ನ್ಯೂಪಡ್ಪು ಸರಕಾರಿ ಪದವಿಪೂರ್ವ ಕಾಲೇಜಿಗೆ ದಗನೆಪಡ್ಪುವಿನಲ್ಲಿ ಸರಕಾರದಿಂದ ಮಂಜೂರುಗೊಂಡಿರುವ ಜಾಗದಲ್ಲಿ ಎಂಆರ್ ಪಿಎಲ್ ಕಂಪೆನಿ ಮಂಗಳೂರು ಇದರ 45 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಕಾಲೇಜಿನ ನೂತನ ಕಟ್ಟಡದ 2 ಕೊಠಡಿಗಳಿಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.
ಕರ್ನಾಟಕ ವಿಧಾನಸಭಾಧ್ಯಕ್ಷ ಡಾ.ಯು.ಟಿ.ಖಾದರ್ ಫರೀದ್ ಎಂಆರ್ ಪಿಎಲ್ ಕಂಪೆನಿ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಕಾಲೇಜಿನ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಗೈದರು.ಬಳಿಕ ಮಾತನಾಡಿದ ಅವರು ,ನ್ಯೂಪಡ್ಪು ಸರಕಾರಿ ಪದವಿಪೂರ್ವ ಕಾಲೇಜಿನ ಮುಂದಿನ ಅಭಿವೃದ್ಧಿ ದೃಷ್ಟಿಯಲ್ಲಿ ಉತ್ತಮ ಕಟ್ಟಡ ನಿರ್ಮಾಣದ ನೀಲ ನಕಾಶೆ ತಯಾರಿಸಿದ್ದು, ಕಾಲೇಜು ಕಟ್ಟಡದೊಂದಿಗೆ ಮೈದಾನ ನಿರ್ಮಾಣಕ್ಕೆಆದ್ಯತೆ ನೀಡಿದ್ದು, ಎಂಆರ್ ಪಿಎಲ್ ಸಹಯೋಗದಲ್ಲಿ ನಿರ್ಮಾಣಗೊಳ್ಳಿರುವ ಹೊಸ ಕಟ್ಟಡದೊಂದಿಗೆ ಮುಂದಿನ ಬಾರಿಯ ಅನುದಾನವನ್ನು ನ್ಯೂಪಡ್ಪು ಶಾಲೆಗೆ ಮೀಸಲಿಡುತ್ತೇನೆ ಎಂದು ಅಭಿಪ್ರಾಯಪಟ್ಟರು.ಪದ್ಮಶ್ರೀ ಹರೇಕಳ ಹಾಜಬ್ಬ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಫರೀದ್ನಗರ ರಿಫಾಯಿ ಜುಮಾ ಮಸೀದಿಯ ಖತೀಬ್ ಸರ್ಫುದ್ದೀನ್ ತಂಙಳ್ ಹೈದ್ರೋಸಿ ಶಂಕುಸ್ಥಾಪನೆಗೈದರು.
ತ್ವಾಹಾ ಜುಮಾ ಮಸೀದಿ ಖತೀಬ್ ಮುಶ್ತಾಕ್ ಕಾಮಿಲ್ ಸಖಾಫಿ, ಅಧ್ಯಕ್ಷ ಆಸಿಫ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹರೇಕಳ ಹಾಜಬ್ಬ, ಪ್ರಾಂಶುಪಾಲ ಡಾ| ಮುಸ್ತಫಾ, ಸಮಿತಿ ಸದಸ್ಯ ಸಂಶುದ್ದೀನ್, ಅಶ್ರಫ್, ಬಿಐಟಿ ಕಾಲೇಜು ಪ್ರಾಂಶುಪಾಲ ಖಲೀಲ್ ಶೇಖ್, ಹರೇಕಳ ಗ್ರಾ.ಪಂ. ಉಪಾಧ್ಯಕ್ಷ ಎಂ.ಪಿ.ಅಬ್ದುಲ್ ಮಜೀದ್, ಮಾಜಿ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ, ಎಚ್.ಶಾಲಿ, ಸದಸ್ಯರಾದ ಅಬ್ದುಲ್ ಸತ್ತಾರ್ ನ್ಯೂಪಡ್ಪು, ಎಸ್.ಎಂ. ಬಶೀರ್, ಅಬೂಬಕ್ಕರ್ ಸಿದ್ದೀಕ್, ಕಾರ್ಯದರ್ಶಿ ತಾರಾಕ್ಷಿ, ಹಿರಿಯರಾದ ಅಣ್ಣಿ ಪೂಜಾರಿ, ಕಾಲೇಜಿನ ಪ್ರಾಧ್ಯಾಪಕರಾದ ಚೈತ್ರಾ ಶೆಟ್ಟಿ, ಮಂಜು ಎಂ.ಸಿ., ಬಾಲಕೃಷ್ಣ ಎನ್.ವಿ. ಮೊದಲಾದವರು ಉಪಸ್ಥಿತರಿದ್ದರು.ಮಂಗಳೂರು ತಾಲೂಕು ಪಂಚಾಯತ್ ಮಾಜಿ ಸದಸ್ಯ ಮುಸ್ತಫಾ ಹರೇಕಳ ಸ್ವಾಗತಿಸಿದರು.ಉಪನ್ಯಾಸಕಿ ಮಮತಾ ಕಿಶೋರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.