ಶ್ರೀ ಓಂಕಾರ ಭಜನಾ ಮಂಡಳಿ ಆನೆಕಲ್ಲು : ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಆನೆಕಲ್ಲು : ಕೇರಳ ಕರ್ನಾಟಕ ಗಡಿ ಭಾಗವಾದ ಆನೆಕಲ್ಲಿನಲ್ಲಿ 37 ವರ್ಷಗಳ ಇತಿಹಾಸವಿರುವ ಶ್ರೀ ಓಂಕಾರ ಭಜನಾ ಮಂಡಳಿ ಇದರ ನೂತನ ಮಂದಿರದ ಕಟ್ಟಡಕ್ಕೆ ಜಗದ್ಗುರು ಶಂಕರಾಚಾರ್ಯ ತೋಟಕಾರ್ಚಾರ್ಯ ಸಂಸ್ಥಾನ ಎಡನೀರು ಮಠದ ಪೀಠಾಧೀಶರಾದ ಪರವಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮಿಗಳು ಹಾಗೂ ಶ್ರೀ ಗುರುದೇವ ದತ್ತ ಸಂಸ್ಥಾನಂ ಒಡೆಯುವರು ಇದರ ಪೀಠಾಧೀಶರಾದ ಪರವಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಇವರುಗಳು ಶಿಲಾನ್ಯಾಸವನ್ನು ನೆರವೇರಿಸಿದರು.

ವೇದಮೂರ್ತಿ ಬೋಳಂತಕೋಡಿ ರಾಮ ಭಟ್ ಹಾಗೂ ಗೋಪಾಲಕೃಷ್ಣ ಭಟ್ ಕಳಾಯಿ ಇವರು ವೈದಿಕ ವಿಧಿ ವಿಧಾನ ನೆರವೇರಿಸಿಕೊಟ್ಟರು. ಹಿರಿಯ ವಕೀಲರಾದ ಹಾಗೂ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಶ್ರೀಯುತ ಒ .ಶಾಮ್ ಭಟ್ ಉಪಸ್ಥಿತರಿದ್ದರು.

ನಂತರ ಜರಗಿದ ಸಭಾ ಕಾರ್ಯಕ್ರಮದಲ್ಲಿ ಎಡನೀರು ಶ್ರೀಗಳು ಹಾಗೂ ಒಡಿಯೂರು ಶ್ರೀಗಳು ಆಶೀರ್ವಚನವನ್ನಿತ್ತು ಶುಭ ಹಾರೈಸಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು, ನಿವೃತ್ತ ಅಂಚೆಪಾಲಕರಾದ ರಾಮ ನಾಯ್ಕ್ ಕುಕ್ಕಿನಾರ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಬೋಳಂತಕೋಡಿ ರಾಮ ಭಟ್ ಧಾರ್ಮಿಕ ಉಪನ್ಯಾ ಸ ನೀಡಿದರು. ಎ ಯು ಪಿ ಶಾಲೆ ಆನೆಕಲ್ಲಿನ ಶಿಕ್ಷಕರಾದ ರವಿಶಂಕರ್ ಎಸ್ ಇವರು ಸಮಾಜಕ್ಕೆ ಭಜನಾ ಮಂದಿರದ ಅವಶ್ಯಕತೆಯ ಬಗ್ಗೆ ಮಾತನಾಡಿದರು. ಭಾರತ ಸೇವಾಶ್ರಮ ಕನ್ಯಾನ ಇದರ ಕಾರ್ಯದರ್ಶಿಗಳಾದ ಈಶ್ವರ ಭಟ್ ಎಸ್ ಇವರು ಇಂದಿನ ದಿನದಲ್ಲಿ ಮಂದಿರದ ಅವಶ್ಯಕತೆ ಬಗ್ಗೆ ತಿಳಿಸಿದರು. ಶ್ರೀಯುತ ಸುಬ್ರಾಯ ನಂದೋಡಿ ಇವರು ಸುಸ್ಥಿರ ಸಂಘಟನೆ ಅವಶ್ಯಕತೆ ಹಾಗೂ ಅದನ್ನು ರೂಪಿಸುವ ಬಗ್ಗೆ ತಿಳಿಹೇಳಿದರು.

ಕಾರ್ಯಕ್ರಮದಲ್ಲಿ ಸ್ಥಾಪಕ ಕಾರ್ಯದರ್ಶಿ ಸದಾಶಿವ್ ಭಟ್ ಆನೆಕಲ್ಲು, ಛತ್ರ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ, ಕೃಷ್ಣ ನಾಯ್ಕ್ ಸೊಡಂಕೂರು, ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಪ್ರಬಂಧಕರು ಶ್ರೀನಿವಾಸ್ ನಾಯ್ಕ್ ಆನೆಕಲ್ಲು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರಮೇಶ್ ಉಪಸ್ಥಿತರಿದ್ದರು. ಶ್ರೀಮತಿ ಸುನೀತಾ ಮತ್ತು ಬಳಗದವರು ಪ್ರಾರ್ಥನೆಯನ್ನು ನೆರವೇರಿಸಿದರು. ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿಗಳಾದ ನಾರಾಯಣ ಶೆಟ್ಟಿಗಾರ್ ಬಪ್ಪಾಯಿಮೂಲೆ ಸ್ವಾಗತಿಸಿ, ಮಂದಿರದ ಕಾರ್ಯದರ್ಶಿಗಳು ಹಾಗೂ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ರಾಮಕೃಷ್ಣ ಭಟ್ ಸೊಡಂಕೂರು ಪ್ರಸ್ತಾವಿಕ ಭಾಷಣ ಮಾಡಿದರು. ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಸತ್ಯ ಪ್ರಕಾಶ್ ಆನೆಕಲ್ಲು ವಂದಿಸಿದರು. ಕಿಶೋರ್ ಮಾಸ್ಟರ್ ಆನೆಕಲ್ಲು ಹಾಗೂ ನಾರಾಯಣ ಭಟ್ ಆನೆಕಲ್ಲು ಕಾರ್ಯಕ್ರಮ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!