ಮುಕ್ಕ ಕಾಲೇಜಿನ ವಿದ್ಯಾರ್ಥಿನಿ ಕಾಣೆಯಾಗಿದ್ದ ಪ್ರಕರಣ – ವಯನಾಡಿನಲ್ಲಿ ಮದುವೆ ನೋಂದಣಿ ಬೆಳಕಿಗೆ

ಮಂಗಳೂರು: ಬಿಎಸ್ಸಿ ಕ್ರಿಮಿನಾಲಜಿ ಓದುತ್ತಿದ್ದ ಕಾಸರಗೋಡಿನ ಹಿಂದು ಯುವತಿ ವಯನಾಡಿನ ಮುಸ್ಲಿಂ ಯುವಕನೊಂದಿಗೆ ಪರಾರಿಯಾಗಿದ್ದಾಳೆ.ಮುಕ್ಕ ಶ್ರೀನಿವಾಸ್ ಕಾಲೇಜಿನಲ್ಲಿ ಕ್ರಿಮಿನಾಲಜಿ ಬಿಎಸ್ಪಿ ಕಲಿಯುತ್ತಿದ್ದ ಕಾಸರಗೋಡು ಮೂಲದ ಹಿಂದು ಯುವತಿ, ಕೇರಳದ ವಯನಾಡು ಮೂಲದ ಮುಸ್ಲಿಂ ಯುವಕನೊಂದಿಗೆ ಎಸ್ಕೆಪ್ ಆಗಿದ್ದು, ವಯನಾಡಿನಲ್ಲಿ ರಿಜಿಸ್ಟರ್ ಮದುವೆಯಾಗಲು ಮುಂದಾಗಿರುವ ಘಟನೆ ನಡೆದಿದೆ.

ಕಾಸರಗೋಡು ಜಿಲ್ಲೆಯ ಮಧೂರು ಬಳಿಯ ಮೀಪುಗುರಿ ನಿವಾಸಿ, ಬಿಲ್ಲವ ಸಮುದಾಯದ ವಿದ್ಯಾರ್ಥಿನಿ ವೈಶಾಲಿ ಮೂರು ವರ್ಷಗಳಿಂದ ಮಂಗಳೂರಿನ ಮುಕ್ಕ ಶ್ರೀನಿವಾಸ್ ಕಾಲೇಜಿನಲ್ಲಿ ಬಿಎಸ್ಪಿ ಕಲಿಯುತ್ತಿದ್ದಳು. ಈ ಬಾರಿ ಬಿಎಸ್ಸಿ ಪದವಿ ಮುಗಿದಿದ್ದರೂ, ಸುರತ್ಕಲ್ ಬಳಿಯಿರುವ ಪಿಜಿಯಲ್ಲಿ ತನ್ನ ಸಹವರ್ತಿ ಗೆಳತಿಯರೊಂದಿಗೆ ಉಳಿದುಕೊಂಡಿದ್ದಳು. ಈ ವೇಳೆ, ವಯನಾಡು ಮೂಲದ ಮೊಹಮ್ಮದ್ ಮಿದ್ಲಾಜ್ ಎಂಬ ಯುವಕನ ಗೆಳೆತನ ಆಗಿತ್ತು ಎನ್ನಲಾಗಿದೆ.

ಮೊಹಮ್ಮದ್ ಮಿದ್ಲಾಜ್ ಸುರತ್ಕಲ್ ನಲ್ಲಿರುವ ಅಟ್ಲಾಸ್ ಜುವೆಲ್ಲರಿಯಲ್ಲಿ ಕೆಲಸಕ್ಕಿದ್ದ. ಜನವರಿ 31ರಂದು ವಯನಾಡಿನಲ್ಲಿ ಇವರಿಬ್ಬರು ರಿಜಿಸ್ಟರ್ ಮದುವೆಗೆ ನೋಂದಣಿ ಮಾಡಿಕೊಂಡಿದ್ದು, ಅದರ ಫೋಟೋವನ್ನು ಅಲ್ಲಿನ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಂಟಿಸಲಾಗಿತ್ತು. ಈ ಫೋಟೋ ಜಾಲತಾಣದ ಮೂಲಕ ವೈಶಾಲಿ ಕುಟುಂಬಸ್ಥರಿಗೆ ಫೆ.8ರಂದು ಸಿಕ್ಕಿತ್ತು. ಇದರಂತೆ, ಕತಾರ್ ನಲ್ಲಿ ಉದ್ಯೋಗದಲ್ಲಿದ್ದ ತಂದೆ ನೇರವಾಗಿ ಊರಿಗೆ ಬಂದಿದ್ದು, ಪತ್ನಿ ಜೊತೆಗೆ ಸುರತ್ಕಲ್ ನಲ್ಲಿರುವ ಪಿಜಿಗೆ ಬಂದಿದ್ದಾರೆ.

ಅಲ್ಲಿನ ಸಿಸಿಟಿವಿ ತಪಾಸಣೆ ನಡೆಸಿದಾಗ ಫೆ.8ರಂದು ಬೆಳಗ್ಗೆ ಕೊನೆಯ ಬಾರಿಗೆ ಪ್ಯಾಂಟ್, ಶರ್ಟ್ ಧರಿಸಿಕೊಂಡು ವ್ಯಾನಿಟಿ ಬ್ಯಾಗ್ ಜೊತೆಗೆ ವೈಶಾಲಿ ಅಲ್ಲಿಂದ ತೆರಳಿರುವುದು ಕಂಡುಬಂದಿದೆ. ಅದಕ್ಕೂ ಮೊದಲು ತಾಯಿ ಮಗಳ ಜೊತೆಗೆ ಫೋನ್ ಮಾಡಿ ಮಾತನಾಡಿದ್ದರು. ಆನಂತರ, ಆಕೆಯ ಪೋನ್ ಸ್ವಿಚ್ ಆಫ್ ಆಗಿತ್ತು. ಬಳಿಕ ಸುರತ್ಕಲ್ ಠಾಣೆಯಲ್ಲಿ ಹೆತ್ತವರು ದೂರು ನೀಡಿದ್ದು, ಪೊಲೀಸರು ತಕ್ಷಣವೇ ಕೇರಳದ ವಯನಾಡಿಗೆ ತೆರಳಿದ್ದಾರೆ. ಸುರತ್ಕಲ್ ಅಟ್ಲಾಸ್ ಜುವೆಲ್ಲರಿ ಮಾಲಕನ ಮೂಲಕ ಮಾಹಿತಿ ಪಡೆದ ಪೊಲೀಸರು ವಯನಾಡಿಗೆ ತೆರಳಿ ಮಿದ್ದಾಜ್ ಮತ್ತು ವೈಶಾಲಿಯನ್ನು ಪತ್ತೆ ಮಾಡಿದ್ದಾರೆ.

ಜೋಡಿಯನ್ನು ಸ್ಥಳೀಯ ಠಾಣೆಗೆ ಕರೆದೊಯ್ದಿದ್ದು ಅಲ್ಲಿ ಸುರತ್ಕಲ್ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಈ ವೇಳೆ, ಹುಡುಗಿಯ ಹೆತ್ತವರು ಆಕೆಯ ಬಳಿ ಅಂಗಲಾಚಿದ್ದು 22 ವರ್ಷಗಳ ಕಾಲ ಜೋಪಾನದಲ್ಲಿ ಸಾಕಿದ್ದೇವೆ, ಈಗ ನಮ್ಮನ್ನು ಬಿಟ್ಟು ಹೋಗಬೇಡ ಎಂದು ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ. ಆದರೆ ವೈಶಾಲಿ ತಾನು ಮಿದ್ದಾಜ್ ಜೊತೆಗೇ ತೆರಳುವುದಾಗಿ ಹೇಳಿ ಪಟ್ಟು ಹಿಡಿದಿದ್ದರಿಂದ ಪೊಲೀಸರು ಅಲ್ಲಿನ ಠಾಣೆಯಲ್ಲೇ ಹೇಳಿಕೆ ಪಡೆದು ಬಿಟ್ಟಿದ್ದಾರೆ.

ಬಿಎಸ್ಪಿ ಕ್ರಿಮಿನಾಲಜಿ ಓದಿ ಮುಗಿಸಿದ್ದ ವೈಶಾಲಿ ಒಂದು ವರ್ಷದಿಂದ ತನ್ನ ಗೆಳತಿಯರೊಂದಿಗೆ ಸುತ್ತಾಟ ಮಾಡಿಕೊಂಡಿದ್ದಳು ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಹೆತ್ತವರಿಗೆ ಇವರು ಮೂವರು ಹೆಣ್ಮಕ್ಕಳಾಗಿದ್ದು ದೊಡ್ಡವಳು ಮದುವೆಯಾಗಿ ಅಮೆರಿಕದಲ್ಲಿದ್ದಾಳೆ. ಈಕೆ ಎರಡನೆಯವಳಾಗಿದ್ದು, ಇನ್ನೊಬ್ಬಳು ತಂಗಿಯಿದ್ದಾಳೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!