ಮಂಗಳೂರು:ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಫೆ.14 ರಂದು ಬೆಳಗ್ಗೆ 10 ಗಂಟೆಗೆ ತುಳು ಸಾಹಿತ್ಯ ಅಕಾಡೆಮಿಯ ಸಭಾಂಗಣದಲ್ಲಿ ಸಂಗೀತ ನೃತ್ಯ ವಿಚಾರ ಸಂಕಿರಣ ಸಂಭ್ರಮ-2026 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿ ಸದಸ್ಯ ಸಂಚಾಲಕರಾದ ಡಾ|ಗೀತಾ ಬಿ.ವಿ. ತಿಳಿಸಿದರು.
ಅವರು ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಶುಭ ಧನಂಜಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ವಿಚಾರ ಸಂಕಿರಣವನ್ನು ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರದ ನಿಕಟಪೂರ್ವ ಯೋಜನಾ ನಿರ್ದೇಶಕ ಪ್ರೊ|ಬೋಳಾರ ಶಿವರಾಮ ಶೆಟ್ಟಿಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ ಸಹಾಯಕ ನಿರ್ದೇಶಕ ರಾಜೇಶ ಜಿ., ಕರ್ನಾಟಕ ತುಳು ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಭಾಗವಹಿಸಲಿದ್ದಾರೆ ಎಂದರು.
ವಿಚಾರ ಸಂಕಿರಣದಲ್ಲಿ ಭಾಗವಹಿಸುವ ಸಂಶೋಧಕರು ತಮ್ಮ ಪಿಚ್‌ಡಿ ಪದವಿಯ ಸಂಶೋಧನೆಯ ವಿಷಯವನ್ನು ಮಂಡಿಸಲಿದ್ದಾರೆ. ಸುಮಾರು 15 ಹಿರಿಯ ಮತ್ತು ಕಿರಿಯ ಸಂಶೋಧಕರು ಗೋಷ್ಠಿಗಳಲ್ಲಿ ತಮ್ಮ ವಿಷಯವನ್ನು ಪ್ರಾಯೋಗಿಕವಾಗಿ ಮಂಡಿಸಲಿದ್ದಾರೆ. ಸಂಗೀತ ಗೋಷ್ಠಿ, ಭರತನಾಟ್ಯ ಗೋಷ್ಠಿ, ಹಿಂದೂಸ್ತಾನಿ ಸಂಗೀತ ಗೋಷ್ಠಿ ನಡೆಯಲಿದೆ. ಜತೆಗೆ ಮಂಗಳೂರಿನ ಕಲಾವಿದರಿಂದ ಭರತನಾಟ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನೃತ್ಯ ಗುರುಗಳಾದ ಚಂದ್ರಶೇಖರ ನಾವಡ, ರಾಜಶ್ರೀ ಉಳ್ಳಾಲ್ ಹಾಗೂ ಶ್ರೀಧರ್ ಹೊಳ್ಳ ಉಪಸ್ಥಿತರಿದ್ದರು