ಹಿರಿಯ ಸಿಪಿಐ ನೇತಾರ ತುಳುನಾಡಿನಲ್ಲಿ ಕಮ್ಯುನಿಸ್ಟ್ ಸ್ವರ ಮೊಳಗಿಸಿದ ಕಾಂ|| ಬಿ.ವಿ ರಾಜನ್ ರವರ ದ್ವಿತೀಯ ಚರಮ ವಾರ್ಷಿಕ ದಿನವು ಪುಷ್ಪಾರ್ಚನೆ ಮತ್ತು ಅನುಸ್ಮರಣೆಯೊಂದಿಗೆ ಜರಗಿತು. ಸಿಪಿಐ ದೇಶೀಯ ಕೌನ್ಸಿಲ್ ಸದಸ್ಯರಾದ ಗೋವಿಂದನ್ ಪಳ್ಳಿಕಾಪ್ಪಿಲ್ ಉದ್ಘಾಟಿಸಿದರು. ಜಯರಾಮ್ ಬಲ್ಲಂಗುಡೇಲ್ ಅಧ್ಯಕ್ಷತೆ ವಹಿಸಿದರು. ಹಿರಿಯ ಕಾರ್ಯಕರ್ತರಾದ ಚಂದ್ರಶೇಖರ ಕೀರ್ತೇಶ್ವರ ಧ್ವಜಾರೋಹಣಗೈದರು.
ಎಸ್. ರಾಮಚಂದ್ರ ಬಡಾಜೆ, ರಾಮಕೃಷ್ಣ ಕಡಂಬಾರ್ ಮೊದಲಾದವರು ಅನುಸ್ಮರಣಾ ಭಾಷಣ ಮಾಡಿದರು. ಬಿ.ವಿ ರಾಜನ್ ಪತ್ನಿ ನಾರಾಯಣಿ ರಾಜನ್, ಪುತ್ರಿ ರಮ್ಯಾ ರಾಜನ್,ಮೋಟಾರ್ ಯೂನಿಯನ್ ಜಿಲ್ಲಾ ಅಧ್ಯಕ್ಷರಾದ ಮುಸ್ತಫಾ ಕಡಂಬಾರ್, ಶ್ರೀಪತಿ ಭಟ್, ಕೃಷ್ಣ ಆಳ್ವ, ಶ್ರೀಧರ್ ಆರ್.ಕೆ, ಚಿತ್ರವತಿ ಅಂಜರೆ,ನಾರಾಯಣ ಕಜೂರ್, ದಯಾಕರ್ ಮಾಡ ಪಕ್ಷದ ಬಹುಜನ ಸಂಘಟನೆಯ ನೇತಾರರು ಉಪಸ್ಥಿತರಿದ್ದರು. ಅಜಿತ್ ಎಂ.ಸಿ ಲಾಲ್ ಬಾಗ್ ಸ್ವಾಗತಿಸಿ, ಹರೀಶ್ ಕೆ.ಆರ್ ವಂದಿಸಿದರು.