ಮಂಜೇಶ್ವರದಲ್ಲಿ ಸುರಿದ ಧಾರಾಕಾರ ಮಳೆ ಮನೆ, ಮಸೀದಿ ,ದೇವಸ್ಥಾನ, ವ್ಯಾಪಾರ ಸಂಸ್ಥೆ ಜಲಾವೃತ

ಮಂಜೇಶ್ವರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಮನೆ, ಮಸೀದಿ ,ದೇವಸ್ಥಾನ ,ವ್ಯಾಪಾರ ಸಂಸ್ಥೆ ಜಲಾವೃತಗೊಂಡಿದೆ.
ಎಡೆಬಿಡದೆ ಸುರಿಯುತ್ತಿರುವ ಮಳೆನೀರಿನಿಂದಾಗಿ ಮಂಜೇಶ್ವರ ತಾಲೂಕಿನ ಪ್ರದೇಶವಾದ ಕನಿಲ, ಪೊಸೋಟು , ಹೊಸಂಗಡಿ , ಬಂಗ್ರಮಂಜೇಶ್ವರ್ ,ಕಾಡಿಯಾರ್ ಸಂಪೂರ್ಣ ಜಲಾವೃತವಾಗಿದೆ.


ಹಾಗು ಅಂಗಡಿ , ಕ್ಲಬ್ ದೇವಾಲಯಗಳಿಗೂ ನೀರು ನುಗ್ಗಿದ್ದು ಹಲವು ನಾಶ ನಷ್ಟ ಸಂಭವಿಸಿದೆ. ಕೆಲವೊಂದು ಕಡೆಗಳಲ್ಲಿ ಅಪಾಯವನ್ನುಟುಮಾಡಿದೆ .

ಕಾಡಿಯಾರ್ ನಲ್ಲಿ ಮೀನಿನ ಬಲೆ ದೋಣಿ , ದೋಣಿಯ ಇಂಜಿನ್ , ಮನೆಗಳಿಗೆ ಹನಿಯಾಗಿ ಬಹಳಷ್ಟು ನಾಶ ನಷ್ಟ ಸಂಭವಿಸಿದೆ. ಪಂಚಾಯತ್ ಮತ್ತು ನೀರಾವರಿ ಇಲಾಖೆಯ ಅಲಕ್ಷವೇ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಠಾರು ದೈವಗಳ ಕ್ಷೇತ್ರದ ಅಣ್ಣದೈವದ ಭಂಡಾರ ಮನೆ ಮತ್ತು ಪರಿಸರವು ಹಾಗೂ ಪರಿಸರದ ಬಯಲುಗಳು, ತೋಡು, ಕೆರೆಗಳು ಜಲಾವೃತವಾಗಿದೆ. ಪರಿಸರದ ಹಲವು ಮನೆಗಳಿಗೆ ನೀರು ನುಗ್ಗಿ ವಿದ್ಯುತ್ ಉಪಕರಣಗಳು ಪೀಠೋಪಕರಣಗಳು ನಾಶವಾಗಿರೋದಾಗಿ ವರದಿಯಾಗಿದೆ.

ಜನರನ್ನು ದೋಣಿಯ ಮೂಲಕ ಸ್ಥಳಂತರಿಸಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!