ಪುತ್ತೂರು:ಕರಾವಳಿ ಮೂಲದ ಕರಾಡ ಬ್ರಾಹ್ಮಣ ಸಮಾಜದ ಸಮುದಾಯದ ಜನಾಂಗದವರು ಬೆಂಗಳೂರು ನಗರದಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕವಾಗಿ ನಮ್ಮ ಸಮಾಜದವರು ನೆಲೆಸಿರುತ್ತಾರೆ. ಶೃಂಗೇರಿ ಜಗದ್ಗುರುಗಳು ಹಾಗೂ ಶೃಂಗೇರಿ ಮಠದ ಮಾರ್ಗದರ್ಶನದಲ್ಲಿ ಬೆಂಗಳೂರಿನಲ್ಲಿ ಕರಾಡ ಬ್ರಾಹ್ಮಣ ಸಮುದಾಯದವರು ಅನೇಕ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಈ ಸಮುದಾಯದವರು ಯಾವುದೇ ಸಭೆ-ಸಮಾರಂಭಗಳನ್ನು ನಡೆಸಬೇಕೆಂದಲ್ಲಿ ಖಾಸಗಿ ರವರ ಮೊರೆ ಹೋಗುವಂತಹ ಸಂದರ್ಭ ನಿರ್ಮಾಣವಾಗಿರುತ್ತದೆ. ಈ ಸಮಾಜದವರು ತಮ್ಮ ಧಾರ್ಮಿಕ, ಸಾಮಾಜಿಕ ಹಾಗೂ ಇನ್ನಿತರೆ ಗೌರವ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುವಂತೆ ಬೆಂಗಳೂರು ನಗರದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕ್ರಸಂ.32 ನಾಡಪ್ರಭು ಕೆಂಪೇಗೌಡ ಬಡಾವಣೆ ಬ್ಲಾಕ್-7 ಕೊಮ್ಮಘಟ್ಟ ನಿವೇಶನ ಸಂ. 02 ಅನ್ನು ಸದರಿ ಸಮಾಜದ ಅನುಕೂಲಕ್ಕೆ ನೀಡುವಂತೆ ದಿನಾಂಕ: 02-05-2025 ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದು, ನೋಂದಣಿ ಶುಲ್ಕವನ್ನು ಪಾವತಿಸಿರುತ್ತಾರೆ.
ಆದುದರಿಂದ, ಕರಾಡ ಬ್ರಾಹ್ಮಣ ಸಮಾಜದವರ ಅನುಕೂಲಕ್ಕಾಗಿ ಕೊಮ್ಮಘಟ್ಟ ಗ್ರಾಮದಲ್ಲಿ ನಿವೇಶನವನ್ನು ಆದ್ಯತೆಯ ಮೇರೆಗೆ ಹಂಚಿಕೆ ಮಾಡಿಕೊಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ.ಮನವಿಯನ್ನು ಉಪಮುಖ್ಯಮಂತ್ರಿಡಿಕೆ ಶಿವಕುಮಾರ್,ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷಎನ್ಎ ಹ್ಯಾರಿಸ್ ರವರಿಗೂ ಸಲ್ಲಿಸಲಾಗಿದೆ.