ಮೀಪುಗುರಿಯಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮ
ಕಾಸರಗೋಡು: ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಪರೇಷನ್ ತೂಫಾನ್ – ಮಾದಕ ದ್ರವ್ಯ ವಿರೋಧಿ ಜಾಗೃತಿ ಗ್ರಾಮಸಭೆ ಕಾರ್ಯಕ್ರಮವನ್ನು ಮಧೂರು ಗ್ರಾಮ ಪಂಚಾಯತ್‌ನ 13ನೇ ವಾರ್ಡ್‌ನ ಮೀಪುಗುರಿ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾಯಿತು.


ಕಾರ್ಯಕ್ರಮವನ್ನು ಮಧೂರು ಗ್ರಾಮ ಪಂಚಾಯತ್‌ನ 13ನೇ ವಾರ್ಡ್ ಸದಸ್ಯರಾದ ಶ್ರೀ ಗಣೇಶ್ ಮೀಪುಗುರಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ನಾರ್ಕೋಟಿಕ್ ಸೆಲ್ ಡಿವೈಎಸ್ಪಿ ಡಾ. ಬಾಲಕೃಷ್ಣನ್ ಅವರು ಗೌರವ ಉಪಸ್ಥಿತಿಯೊಂದಿಗೆ ಭಾಗವಹಿಸಿದರು.

ಕಾಸರಗೋಡು ಪೊಲೀಸ್ ಠಾಣೆಯ ಎಸ್‌ಐ ಸುಭಾಷ್ ಕುಮಾರ್, ಎಸ್‌ಐ ಸುಧೀರ್ ಹಾಗೂ ಎಎಸ್‌ಐ ಪ್ರದೀಪ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
“ಮಾದಕ ದ್ರವ್ಯಗಳಿಗೆ ಇಲ್ಲ ಎನ್ನಿ – ನಮ್ಮ ಮುಂದಿನ ಪೀಳಿಗೆಯ ಭವಿಷ್ಯವನ್ನು ರಕ್ಷಿಸೋಣ” ಎಂಬ ಸಂದೇಶದೊಂದಿಗೆ ಸಾರ್ವಜನಿಕರಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

