ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 58ನೇ ಬೋಳಾರ ವಾರ್ಡಿನಲ್ಲಿ ಸುಮಾರು ಒಂದು ಕೋಟಿ ರೂಪಾಯಿ ವಿಶೇಷ ಅನುದಾನದಲ್ಲಿ ಟಿವಿಎಸ್ ಫ್ಯಾಕ್ಟರಿ ರಸ್ತೆಯ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಈ ಕಾರ್ಯಕ್ರಮವು ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರುಗೊಂಡಿದ್ದ ಅನೇಕ ಕಾಮಗಾರಿಗಳಿಗೆ ಈಗಿನ ಕಾಂಗ್ರೆಸ್ ಸರ್ಕಾರ ತಡೆ ನೀಡಿತ್ತು ಎಂದು ಆರೋಪಿಸಿದರು. ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ಅವರಲ್ಲಿ ಅನೇಕ ಬಾರಿ ಮನವಿ ಮಾಡಿದ ಬಳಿಕ ತಡೆ ಹಿಡಿಯಲಾಗಿದ್ದ ಅನುದಾನಗಳು ಮತ್ತೆ ಬಿಡುಗಡೆಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಪಾಲಿಕೆ ಸದಸ್ಯರುಗಳಾದ ಭಾನುಮತಿ ಪಿ.ಎಸ್, ಶೈಲೇಶ್ ಶೆಟ್ಟಿ, ಮಂಡಲದ ಉಪಾಧ್ಯಕ್ಷರಾದ ದೀಪಕ್ ಪೈ, ಶಕ್ತಿ ಕೇಂದ್ರದ ಅಧ್ಯಕ್ಷರಾದ ಪ್ರಸಾದ್ ಬೋಳಾರ್, ಪ್ರಮುಖರಾದ ಅಮಿತ್ ಶೆಟ್ಟಿ, ದಿನೇಶ್ ಕರ್ಕೇರ, ಪ್ರವೀಣ್ ನಿಡ್ಡೆಲ್, ನಾಗರಾಜ್ ಆಚಾರ್ಯ, ಸಾತ್ವಿಕ್ ಭುವನ್, ಸುಜಾತ ಆಳ್ವ, ರೂಪ, ಜಯಶ್ರೀ, ಕೇಶವ್ ಶೆಟ್ಟಿ, ದಿನೇಶ್ ಶೆಟ್ಟಿ, ಸುರೇಶ್, ಪುಂಡಲೀಕ ಸುವರ್ಣ, ದೇವದಾಸ್ ಶೆಟ್ಟಿ, ರವಿ ಆಚಾರಿ, ಪುಟ್ಟ, ಗಿರೀಶ್, ರಕ್ಷಿತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.