ಬಂಟ್ವಾಳ: ತಾಲೂಕಿನ ಎರಡು ಗ್ರಾಮಗಳಲ್ಲಿ ಸಿಡಿಲಿನ ಆಘಾತದಿಂದ ಮನೆ ಹಾಗೂ ಅಡಿಕೆ ತೋಟಕ್ಕೆ ಹಾನಿಯಾಗಿರುವ ಘಟನೆ ವರದಿಯಾಗಿದೆ.

ಕರ್ಪೆ ಗ್ರಾಮದ ಶಿಕಾಯಿಗುಡ್ಡೆ ನಿವಾಸಿ ಉಮೇಶ್ ಪೂಜಾರಿ ಅವರ ಪತ್ನಿ ಲೀಲಾ ಅವರ ಮನೆಗೆ ಗುರುವಾರ ಸಿಡಿಲು ಬಡಿದು ಹಾನಿಯಾಗಿದೆ. ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ.

ಇದೇ ವೇಳೆ ರಾಯಿ ಗ್ರಾಮದ ಕುದ್ಕೋಳಿ ನಿವಾಸಿ ಲ್ಯಾನ್ಸಿ ಕುವೆಲ್ಲೋ ಅವರ ಅಡಿಕೆ ತೋಟಕ್ಕೂ ಸಿಡಿಲಿನ ಪರಿಣಾಮ ಹಾನಿಯಾಗಿರುವುದಾಗಿ ತಿಳಿದುಬಂದಿದೆ.

ಎರಡೂ ಘಟನೆಗಳಿಂದ ಆಸ್ತಿ ನಷ್ಟ ಸಂಭವಿಸಿದ್ದು, ಹಾನಿಯ ಅಂದಾಜು ಇನ್ನಷ್ಟೇ ತಿಳಿದುಬರಬೇಕಿದೆ.

