ಮಂಗಳೂರು: ಇಂದು ಪ್ರಪಂಚದಾದಂತ್ಯ ವಿಶ್ವ ಮೂತ್ರಪಿಂಡ ದಿನವನ್ನು ಆಚರಿಸಲಾಗುತ್ತಿದ್ದು ಇದು ಮೂತ್ರಪಿಂಡದ ಆರೋಗ್ಯ ರಕ್ಷಣೆಯ ಬಗ್ಗೆ ಹೇಳುತ್ತದೆ . ಎಲ್ಲರಿಗೂ ಮೂತ್ರಪಿಂಡದ ಆರೋಗ್ಯ – ಜನರ ಆರೈಕೆ, ಗ್ರಹವನ್ನು ರಕ್ಷಿಸುವುದು” ಎಂಬ ಥೀಮ್ ನಂತೆ ಜಾಗತಿಕವಾಗಿ ಈ ದಿನವನ್ನು ಆಚರಿಸಲಾಗುತ್ತಿದ್ದು ಈ ಹಿನ್ನಲೆಯಲ್ಲಿ ನಮ್ಮ ಆಸ್ಪತ್ರೆಯು ಮಾರ್ಚ್ 13 ಮತ್ತು 14 ರಂದು 2 ದಿನಗಳವರೆಗೆ ರೂ. 2250/= ರ ಮೂತ್ರಪಿಂಡ ತಪಾಸಣೆ / ಸ್ಕ್ರೀನಿಂಗ್ ಪ್ಯಾಕೇಜ್ ಅನ್ನು ಕೇವಲ ರೂ. 999/= ಗೆ ನೀಡುತ್ತಿದೆ ಎಂದು ಇಂಡಿಯಾನಾ ಆಸ್ಪತ್ರೆಯ ಮೂತ್ರಪಿಂಡ ಕಸಿ ತಜ್ಞ ಡಾ. ಪ್ರದೀಪ್ ಕೆ.ಜೆ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಮೂತ್ರಪಿಂಡ ಕಾಯಿಲೆಯ ದೀರ್ಘಕಾಲೀನ ಹೊರೆಯನ್ನು ಕಡಿಮೆ ಮಾಡಲು ಸಾರ್ವಜನಿಕರು ಆರಂಭಿಕ ತಪಾಸಣೆ ಮತ್ತು ಹೆಚ್ಚಿನ ಜಾಗೃತಿಯತ್ತ ಗಮನಹರಿಸಬೇಕು . ಮೂತ್ರಪಿಂಡ ವೈಫಲ್ಯದ ರೋಗಿಗಳಲ್ಲಿ ಡಯಾಲಿಸಿಸ್ ಜೀವನದ ಗುಣಮಟ್ಟವನ್ನು ಸುಧಾರಿಸಬಹುದು, ಆದರೆ ಅದು ರೋಗವನ್ನು ಸಂಪೂರ್ಣವಾಗಿ ಗುಣಪಡಿಸುವುದಿಲ್ಲ ಮತ್ತು ಬಹುಸಾರಿಗೆ ಜೀವನಪರ್ಯಂತ ಚಿಕಿತ್ಸೆಯ ಅಗತ್ಯವಿರುತ್ತದೆ. ಆದರೆ ಮೂತ್ರಪಿಂಡ ಕಸಿ ಮಾಡಿದರೆ ರೋಗಿಗಳು ಸಾಮಾನ್ಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ವ್ಯವಹಾರ ವಿಭಾಗದ ಮುಖ್ಯಸ್ಥೆ ಲಿಡ್ವಿನ್ ಡಿಸೋಜ ಉಪಸ್ಥಿತರಿದ್ದರು .