ಒಂದು ಊರಲ್ಲಿ ಒಬ್ಬ ಶ್ರೀಮಂತನಿದ್ದ, ಅವನಿಗೆ, ಹೆಂಡತಿ, ಒಬ್ಬಳು ಮಗಳು ಹಾಗೂ ಒಬ್ಬ ಆಪ್ತ ಗೆಳೆಯನಿದ್ದ, ಶ್ರೀಮಂತನು ಸಾಯುವ ಸಮಯ ಬರುವಾಗ ತನ್ನ ಆಸ್ತಿಯನ್ನು ಹೆಂಡತಿ ಮಗಳ ಹೆಸರಲ್ಲಿ ಬರೆಯುವಾಗ, ಅವನಲ್ಲಿ 19 ಕುದುರೆಗಳು ಇದ್ದವು, ಇದನ್ನು
ಸಮ ಅರ್ಧ ಹೆಂಡತಿಗೆ, ಅದರ ಒಂದರ್ಧ ಮಗಳಿಗೆ, ಮತ್ತು ಉಳಿದ ಕುದುರೆಯಲ್ಲಿ ಒಂದೊಂದರಂತೆ 4 ಜನ ಕೆಲಸಗಾರರಿಗೂ ಒಂದನ್ನು ನನ್ನ ಆಪ್ತ ಗೆಳೆಯನಿಗೂ ಕೊಡಬೇಕು ಎಂದು ಬರೆಸಿ ಕೊಳ್ಳುತ್ತಾನೆ…..!
ಇದು ಪಾಲು ಮಾಡುವಾಗ, 19 ಕುದುರೆಗಳಲ್ಲಿ ಸಮಾ ಅರ್ಧ ಹೇಗೆ ಕೊಡುವುದು..? ತುಂಬಾ ತಲೆಬಿಸಿಯಾಗಿ ಏನು ಮಾಡುವುದು ಎಂದು ತೋಚದೆ ತಮ್ಮ ವಕೀಲರು ಅವನ ಗೆಳೆಯನನ್ನು ಕರೆಸಲು ಹೇಳುತ್ತಾರೆ. ಆಗ ಶ್ರೀಮಂತನ ಪತ್ನಿ, ವಕೀಲನಲ್ಲಿ, ನಿಮ್ಮಿಂದ ಆಗದ್ದು ಇನ್ನು ಅವರ ಗೆಳೆಯನಲ್ಲಿ ಆಗುವುದೇ ಎಂದು ವ್ಯಂಗ್ಯ ವಾಗಿ ಹೇಳುತ್ತಾಳೆ.
ಅದಕ್ಕೆ ವಕೀಲರು ಹೇಳುತ್ತಾರೆ ಗೆಳೆಯನಲ್ವಾ ಏನಾದರೂ ಐಡಿಯಾ ಇರಬಹುದು, ಎಂದು ಅವನನ್ನು ಕೆರೆಸಿ ವಿಷಯವನ್ನು ಹೇಳಿದರು. ಗೆಳೆಯ ತಕ್ಷಣ ಅವನು ಬಂದಿರುವಂತಹ ಅವನ ಕುದುರೆಯನ್ನು ಅವರಿಗೆ ಉಡುಗೊರೆಯಾಗಿ ನೀಡಿದ ಅದಕ್ಕೆ ವಕೀಲ ಅರೆ ನಾನು ಇದನ್ನು ಪಾಲು ಮಾಡಲು ಕರೆದದ್ದು, ನೀನು ನೋಡಿದರೆ ಉಡುಗೊರೆ ಕೊಡುತ್ತೀ ಏನು ಇದರ ಅರ್ಥ…?
ಅದಕ್ಕೆ ಗೆಳೆಯ, ನೋಡಿ ಇಲ್ಲಿ ಈಗ ಅವರ ಹೆಸರಲ್ಲಿ ಎಷ್ಟು ಕುದುರೆ ಆಯಿತು…? ಅದನ್ನು ನನ್ನ ಗೆಳೆಯನ ಆಸೆ ಪ್ರಕಾರ ಪಾಲು ಮಾಡಿ ಎಂದ
ವಕೀಲರು ಪಾಲು ಮಾಡ್ತಾರೆ
ಇದ್ದ ಕುದುರೆ 19
ಉಡುಗೊರೆಯಾಗಿ ಸಿಕ್ಕಿದ ಕುದುರೆ 1
ಮೊತ್ತ 20 ಕುದುರೆ
ಅದ್ರಲ್ಲಿ ಹೆಂಡತಿಗೆ ಸಮಾ ಅರ್ಧ ಪಾಲು 10 ಕುದುರೆ , ಅದರ ಅರ್ಧ ಪಾಲು ಮಗಳಿಗೆ 5 ಕುದುರೆ, ಕೆಲಸದ 4 ಜನರಿಗೆ ತಲಾ ಒಂದರಂತೆ 4 ಕುದುರೆ, ಇನ್ನುಳಿದ ಒಂದು ಗೆಳೆಯನಿಗೆ
ಅಲ್ಲಿದ್ದವರು ಅರೆ ಸರಿ ಆಯ್ತಾಲ್ವಾ ಎಂದು ಗೆಳೆಯನನ್ನು ಹೊಗಳಿ ಕುದುರೆಯೊಂದಿಗೆ ಬೀಳ್ಕೊಟ್ಟರು…..!
ನೀತಿ
ಯಾವಾಗಲೂ ಗೆಳೆಯನ ಆಸ್ತಿ ಅಥವಾ ಕುಟುಂಬಕ್ಕೆ ಆಸೆ ಪಡಬಾರದು, ತನ್ನಲ್ಲಿ ಇದ್ದದನ್ನು ಕೊಡುವ ಮನಸು ಇರಬೇಕೇ ಹೊರತು ಅವನಿಂದ ಕೀಳುವ ಸ್ವಭಾವ ಇರಬಾರದು,ತನಗೆ ಸಿಗದಿದ್ದರೂ, ಯಾವುದೇ ಕಷ್ಟ ಬಂದಾಗ ಅವರ ಜೊತೆ ನಿಂತು ಸಮಸ್ಯೆ ಪರಿಹರಿಸಬೇಕು
ಈ ಕಥೆಯಿಂದ ನಾವು ಕಲಿಯುವ ಪಾಠವೆಂದರೆ, ತನಗೆ ಸಿಗದಿದ್ದರೂ, ಯಾವುದೇ ಕಷ್ಟ ಬಂದಾಗ ಅವರ ಜೊತೆ ನಿಂತು ಸಮಸ್ಯೆ ಪರಿಹರಿಸುವವನೇ
🤝ಇವನೇ ನಿಜವಾದ ಗೆಳೆಯ🤝
:✍️:- ಉದಯಮಲ್ಲಿ, ಅಮ್ಮ್ಚಿ ಕೆರೆ, ಬೆದ್ರಡ್ಕ