ಜಿಲ್ಲಾ ಅತ್ಯುತ್ತಮ ಎಸ್ ಡಿ ಎಂ ಸಿ ಪ್ರಶಸ್ತಿಗೆ ಮಂಚಿ – ಕೊಳ್ನಾಡು ಪ್ರೌಢಶಾಲೆ ಆಯ್ಕೆ

ಕರ್ನಾಟಕ ಸರಕಾರ ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ನೀಡಲ್ಪಡುವ ಅತ್ಯುತ್ತಮ ಎಸ್ ಡಿ ಎಂ.ಸಿ ಪುಷ್ಟಿ ಪ್ರಶಸ್ತಿಗೆ ಬಂಟ್ವಾಳ ತಾಲೂಕಿನ ಮಂಚಿ -ಕೊಳ್ನಾಡು ಪ್ರೌಢಶಾಲೆಯು ಆಯ್ಕೆಯಾಗಿದೆ.

ಮಂಚಿ ಕೊಳ್ನಾಡು ಶಾಲೆಯ ಭೌತಿಕ ಮತ್ತು ಶೈಕ್ಷಣಿಕ ಪ್ರಗತಿಯ ಒಟ್ಟಾಗಿ ಸರ್ವತೋಮುಖ ಅಭಿವೃದ್ಧಿಯನ್ನು ಈ ಪ್ರಶಸ್ತಿಗಾಗಿ ಪರಿಗಣಿಸಲಾಗಿದೆ. ತಾಲೂಕು ಶಿಕ್ಷಣಾಧಿಕಾರಿಗಳ ತಂಡ, ಜಿಲ್ಲಾ ಶಿಕ್ಷಣಾಧಿಕಾರಿಗಳ ತಂಡ ಮತ್ತು ಆಯ್ದ ಹತ್ತು ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರ ಮೆಚ್ಚುಗೆಯ ವರದಿಗಳನ್ನಾಧರಿಸಿ ಈ ಪ್ರಶಸ್ತಿಗೆ ಆಯ್ಕೆಗೊಳಿಸಲಾಗಿದೆ. 1 ಲಕ್ಷ ನಗದು ಹಾಗೂ ಪ್ರಶಸ್ತಿ ಪತ್ರದ ಪುರಸ್ಕಾರದ ಗೌರವಕ್ಕೆ ಮಂಚಿ – ಕೊಳ್ನಾಡು ಶಾಲಾಭಿವೃದ್ಧಿ ಸಮಿತಿ ಪಾತ್ರವಾಗಿರುವುದು ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ, ಪೋಷಕ ವೃಂದ ಹಾಗೂ ಶಾಲಾ ಹಿರಿಯ ವಿದ್ಯಾರ್ಥಿ ಸಂಘಕ್ಕೆ ಅಭಿಮಾನ ಮೂಡಿಸಿದೆ.

ಈ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶಿವಶಂಕರ್ ರಾವ್ ಮಂಚಿ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಶೀಲಾ ವಿಟ್ಲ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳಾದ, ನಾರಾಯಣ ಭಟ್ ನೂಜಿಬೈಲು, ಡಾ. ಗೋಪಾಲಾಚಾರ್ ಮಂಚಿ, ಗಣೇಶ್ ಪ್ರಭು ಮೋಂತಿಮಾರು, ಮೋಹನ್ ದಾಸ್ ಶೆಟ್ಟಿ ಪುದ್ದೊಟ್ಟು , ಮಹಾಬಲ ಶೆಟ್ಟಿ ಮಂಚಿ, ಯಶೋಧ ಶೆಟ್ಟಿ , ಸುಲೈಮಾನ್ ಜಿ ಸುರಿಬೈಲು, ಇಬ್ರಾಹಿಂ ಮಂಚಿ, ರಮೇಶ್ ರಾವ್ ಪತ್ತುಮುಡಿ, ಜಯಕಿಶೋರ್ ಮಂಚಿ, ಪ್ರವೀಣ ಕೊಟ್ಟಾರಿ, ಜಯಪ್ರಕಾಶ್ ರೈ ಮೇರಾವು, ರಾಮ್ ಪ್ರಸಾದ್ ರೈ ತಿರುವಾಜೆ, ಮ್ಯಾಕ್ಸಿಂ ಫೆರ್ನಾಂಡಿಸ್ , ನಿಶ್ಚಲ್ ಜಿ ಶೆಟ್ಟಿ, ಕೇಶವ ರಾವ್ ನೂಜಿಪ್ಪಾಡಿ, ಶ್ರೀಮತಿ ಸವಿತಾ, ರಮೇಶ್ ಟೈಲರ್ ಕೋಕಳ, ವಿಜಯಕುಮಾರ್ ಕಯ್ಯೂರು ಹಾಗೂ ಪೋಷಕ ಸದಸ್ಯರಾದ ಗಿರೀಶ್ ಗೌಡ, ಜಯಂತ ಪತ್ತುಮುಡಿ, ಮೊಯಿದಿನಬ್ಬ ಸಿ ಎಚ್ , ಶ್ರೀಮತಿ ಚಂದ್ರಾವತಿ, ಶ್ರೀಮತಿ ಮೀನಾಕ್ಷಿ , ಶ್ರೀಮತಿ ಮೈಮುನಾ, ಶ್ರೀಮತಿ ಚಂದ್ರಿಕಾ, ಶ್ರೀಮತಿ ಫಾತಿಮಾ ಮತ್ತು ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹಮ್ಮದ್ ಅಶ್ರಫ್, ಉಪಾಧ್ಯಕ್ಷರಾದ ಅಸ್ಮಾ ಹಸೈನಾರ್, ಗ್ರಾಮ ಪಂಚಾಯತ್ ಸದಸ್ಯರಾದ ಮಹಮ್ಮದ್ ಮಂಚಿ, ಶ್ರೀಮತಿ ಲವೀನಾ ಡಿಸೋಜ, ಶ್ರೀಮತಿ ವಸಂತಿ, ಕಿಶೋರ್ ದೇವಾಡಿಗ ಇವರೆಲ್ಲರ ಸಹಕಾರವನ್ನು ಸ್ಮರಿಸಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!