ಇತಿಹಾಸ ಪ್ರಸಿದ್ಧ 18 ದೈವಸ್ಥಾನಗಳಿಲ್ಲಿ ಒಂದಾದ ಪುತ್ತಿಗೆ ಶ್ರೀ ಧೂಮಾವತೀ ಕೋಮರಾಯ ಚಾಮುಂಡೇಶ್ವರಿ ಸಪರಿವಾರ ದೈವಗಳ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಅನುಜ್ಞ ಕಲಶ ಮತ್ತು ಬಾಲಾಲಯ ಪ್ರತಿಷ್ಠೆ ಕಾರ್ಯವೂ ತಂತ್ರಿವರ್ಯರಾದ ದೇಲಂಪಾಡಿ ಶ್ರೀ ಗಣೇಶ್ ಇವರ ದಿವ್ಯ ಹಸ್ತದಲ್ಲಿ ನೇರವೇರಿತು.
ಈ ಸಂದರ್ಭದಲ್ಲಿ ಬಾಕುಡ ಸಮಾಜ 18 ದೈವಸ್ಥಾನದ ದೈವದ ಪಾತ್ರಿ ಮತ್ತು ಕಾರ್ನ ವರ ಒಕ್ಕೂಟ ಸಮಿತಿ ಅಧ್ಯಕ್ಷರಾದ ಶ್ರೀ ಶಂಕರ ಅಡ್ಕ ಶ್ರೀ ವಸಂತ ಬಾಡೂರು ಶ್ರೀ ಸುರೇಶ್ ಕುಂಜತ್ತೂರು. ಶ್ರೀ ತುಳಸಿದಾಸ್ ಮಂಜೇಶ್ವರ . ಶ್ರೀ ಜೀವನ್ ದಾಸ್ ಶ್ರೀವಿಜಯ ಪಂಡಿತ್ ಮುಂತಾದ ಗಣ್ಯರು ಹಾಗೂ ಉರಿನ ಪರವೂರ ಮಹನೀಯರು ಉಪಸ್ಥಿತರಿದ್ದರು.
ಜುಲೈ ತಿಂಗಳ 6ರಂದು ಭಾನುವಾರ ಉರ-ಪರಊರ ಭಕ್ತಾಧಿಗಳ ಸಭೆ ಕರೆದು ನೂತನ ಜೀರ್ಣೋದ್ಧಾರ ಸಮಿತಿ ರಚಿಸಲಾಗುವುದು ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತ ಮಹಾಶಯರಾದ ತಾವೆಲ್ಲರೂ ಬಂದು ಜೀರ್ಣೋದ್ಧಾರ ಕಾರ್ಯದಲ್ಲಿ ಕೈಜೋಡಿಸಬೇಕಾಗಿ ದೈವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷರು ಶ್ರೀ ರಘುರಾಮಛತ್ರ0ಪಳ್ಳ ವಿನಂತಿಸಿಕೊಂಡರು.