ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗಳಿಗೆ ನೆರವು,ಜೊತೆಗೆ ಯೋಗಕ್ಷೇಮ ವಿಚಾರಿಸಿದ ಲಂಚುಲಾಲ್ ಕೆ.ಎಸ್

ಸ್ವಾರ್ಥ ಹೆಚ್ಚುತ್ತಿರುವ ಮತ್ತು ಮಾನವೀಯತೆ ಮರೆಯಲಾಗುತ್ತಿರುವ ಕಾಲದಲ್ಲಿ, ಶಿಕ್ಷಣ ಬಯಸುವ ಮಗುವಿಗೆ ಶಿಕ್ಷಣ, ಕಂಕಣ ಕೂಡಿ ಬಂದಿರುವ ಮನೆಮಗಳಿಗೆ ಮದುವೆ, ಆರೋಗ್ಯದ ಸಮಸ್ಯೆಗಳನ್ನು ಹೊಂದಿರುವವನಿಗೆ ಚಿಕಿತ್ಸೆ ಇಂತಹ ಅನೇಕ ಮಹತ್ಕಾರ್ಯಗಳನ್ನು ಯಾವುದೇ ಪಲಾಷೇಕ್ಷೆಯಿಲ್ಲದೆ ನಿಸ್ವಾರ್ಥವಾಗಿ ಮಾಡಿಕೊಂದು ಬಂದವರು ಶ್ರೀ ಲಂಚುಲಾಲ್ ಕೆ.ಎಸ್‌.


ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗಳಿಗೆ ಕೇವಲ ಚಿಕಿತ್ಸೆ ವೆಚ್ಚಮಾತ್ರವಲ್ಲದೆ ಅವರ ಯೋಗಕ್ಷೇಮ ವಿಚಾರಿಸಲು ಆಸ್ಪತ್ರೆಗೆ ಭೇಟಿ ಮಾಡುವುದು – ಜನರ ಗಮನ ಸೆಳೆಯಲು ಅಲ್ಲ, ಪ್ರಶಂಸೆಗಾಗಿ ಅಲ್ಲ, ಅದು ಅವರ ಹೃದಯದಿಂದ ಬಂದ ಕಾಳಜಿ.
ಅವರು ಮಾಡಿದ ಈ ಅನನ್ಯ ನಿಸ್ವಾರ್ಥ ಸೇವೆ ಬೆಳಕಿಗೆ ಬರದಿರಬಹುದು, ಆದರೆ ಅವರಿಂದ ನೆರವು ಪಡೆದಿರುವ ಅದೆಷ್ಟೋ ಜೀವಗಳ ಆಶೀರ್ವಾದ ಇವರ ಮೇಲಿದೆ.


ನಿಜ ಜೀವನದಲ್ಲಿ ಹೀರೋ ಹೇಗಿರಬೇಕು ಅನ್ನೋದನ್ನು ಅವರ ವಿನಯತೆ ಸುಸಂಸ್ಕೃತೆ ಹಿರಿಯರೊಂದಿಗೆ ಕಿರಿಯರೊಂದಿಗೆ ನಡೆದುಕೊಳ್ಳುವ ರೀತಿಯಿಂದ ಅರಿವಾಗುತ್ತದೆ. ನಮಗೆಲ್ಲ ಇವರೆ ನಿಜವಾದ ನಾಯಕ.
ಭಗವಂತನು ಅವರಿಗೆ ಹಾಗೂ ಅವರ ಕುಟುಂಬಕ್ಕೆ ಆಯೂರಾರೋಗ್ಯ ಭಾಗ್ಯ ಸಕಲಸಂಪತ್ತು ಕರುಣಿಸಲಿ. ಇನ್ನಷ್ಟು ನೊಂದವರ ಬಾಳಲ್ಲಿ ಬೆಳಕಾಗಲಿ.
ಇದು ಇತರರಿಗಾಗಿ ಜೀವಿಸುವ ಹೃದಯವಿರುವ ವ್ಯಕ್ತಿಗೆ ಸಲ್ಲುವ ಒಂದು ಸತ್ಯವಾದ ಗೌರವವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!