200 ಬಾಕ್ಸ್ ಮೀನುಗಳಿದ್ದ ಲಾರಿ ಕಳವು: ಇಬ್ಬರು ಬಂಧನ

ಕುಂಬಳೆ: ಬಂದಿಯೊಡ್ ಅಡ್ಕ ಪ್ರದೇಶದಲ್ಲಿ ನಿಲ್ಲಿಸಿದ್ದ ಸುಮಾರು 200 ಬಾಕ್ಸ್ ಮೀನುಗಳಿದ್ದ ಲಾರಿಯನ್ನು ಕಳವು ಮಾಡಿದ ಪ್ರಕರಣದಲ್ಲಿ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಇಚ್ಚಿಲಂಪಾಡಿ ಕೊಡೀಯಮ್ಮ ನಿವಾಸಿ ಅಬ್ದುಲ್ಲ ಎ.ಪಿ (32) ಹಾಗೂ ಕುಂಬಳೆ ಎಡನಾಡು ಮುಕ್ಕರಿಕ್ಕಂಡದ ಮೊಹಮ್ಮದ್ ರಿಜ್ವಾನ್ (27) ಬಂಧಿತರು.

ಅಡ್ಕ ಎಂ. ಸಕ್ಕರಿಯಾ ನೀಡಿದ ದೂರಿನ ಪ್ರಕಾರ, ಸೆಡ್.ಎಂ.ಎಸ್ ಫಿಶ್ ಸರ್ವಿಸ್ ಕಚೇರಿ ಸಮೀಪ ನಿಲ್ಲಿಸಿದ್ದ ಮೀನು ಲಾರಿಯೇ ಕಳುವಾಗಿದೆ. ಶನಿವಾರ ರಾತ್ರಿ 11.30 ಗಂಟೆಯಿಂದ ಮುಂದಿನ ದಿನ ಬೆಳಗ್ಗೆ 8 ಗಂಟೆಯೊಳಗಿನ ಅವಧಿಯಲ್ಲಿ ಕಳವು ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಘಟನೆ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿ ಪರಿಶೀಲಿಸಿದರು. ಜೊತೆಗೆ ರಾತ್ರಿ ವೇಳೆ ಆ ಮಾರ್ಗದಲ್ಲಿ ಸಂಚರಿಸಿದ ವಾಹನಗಳು ಹಾಗೂ ಸಂಶಯಾಸ್ಪದ ವ್ಯಕ್ತಿಗಳ ಕುರಿತು ಮಾಹಿತಿ ಕಲೆಹಾಕಿದರು. ಈ ತನಿಖೆಯ ಆಧಾರದಲ್ಲಿ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ.

ನಂತರ ಅಬ್ದುಲ್ಲ ಎ.ಪಿ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಿದ್ದಾರೆ. ಕಳುವಾದ ಲಾರಿಯನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!