ಕಾಡುಹಂದಿಗೆ ಬೈಕ್ ಡಿಕ್ಕಿ ಹೊಡೆದು ಸವಾರ ಗಂಭೀರ: ಚಿಕಿತ್ಸೆ ಫಲಿಸದೆ ಸಾವು

ಕಾಸರಗೋಡು : ರಸ್ತೆಗೆ ಅಡ್ಡಬಂದ ಕಾಡುಹಂದಿಗೆ ಬೈಕ್ ಢಿಕ್ಕಿಯಾಗಿ ತೀವ್ರ ಗಾಯಗೊಂಡಿದ್ದ ಆಟೋ ಚಾಲಕರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.ಮೊಗ್ರಾಲ್ ಕಡವತ್ ನಿವಾಸಿ ಬಿ.ವಿ. ಅಬ್ದುಲ್ ಕರೀಂ (39) ಸಾವನ್ನಪ್ಪಿದ ದುರ್ದೈವಿ.

​ಕಳೆದ ಶುಕ್ರವಾರ ಮುಂಜಾನೆ ಕಟ್ಟತ್ತಡ್ಕ ಎಕೆಜಿ ನಗರದ ಬಳಿ ಅಬ್ದುಲ್ ಕರೀಂ ಅವರು ಬೈಕ್‌ನಲ್ಲಿ ತೆರಳುತ್ತಿದ್ದಾಗ ದಿಢೀರನೆ ಕಾಡುಹಂದಿಯೊಂದು ರಸ್ತೆಗೆ ಅಡ್ಡಬಂದಿದೆ. ಈ ವೇಳೆ ಹಂದಿಗೆ ಢಿಕ್ಕಿ ಹೊಡೆದು ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿಬಿದ್ದಿತ್ತು.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿತ್ತು.
​ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!