ಶಿರಹಟ್ಟಿಯಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಗದಗ ಜಿಲ್ಲೆ ಶಿರಹಟ್ಟಿಯ ಫಕೀರೇಶ್ವರ ನಗರದಲ್ಲಿರುವ ಎಚ್.ಎಂ. ದೇವಗಿರಿ ಅವರ ನಿವಾಸದಲ್ಲಿ ಕಾಸರಗೋಡಿನ ಕನ್ನಡ ಭವನ, ಗ್ರಂಥಾಲಯ (ರಿ) ಗದಗ ಜಿಲ್ಲಾ ಘಟಕದ ವತಿಯಿಂದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ Dr. Sangamesh Tammanagoudra ವಹಿಸಿದ್ದರು.

ಈ ಸಂದರ್ಭದಲ್ಲಿ ಶಿಕ್ಷಕಿಯಾದ ರತ್ನಾ ಗಿರೋಸಾ ಬದಿ ಅವರನ್ನು ಅವರ ಶೈಕ್ಷಣಿಕ ಹಾಗೂ ಸಂಘಟನಾತ್ಮಕ ಸೇವೆಗಾಗಿ ಸನ್ಮಾನಿಸಲಾಯಿತು. ಅವರು ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದಿದ್ದು, ಬೋಧನೆ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ ಎಂದು ಪ್ರಶಂಸಿಸಲಾಯಿತು.

ಇನ್ನೋರ್ವ ಸನ್ಮಾನಿತ ಅತಿಥಿ ಎಚ್.ಎಂ. ದೇವಗಿರಿ ಅವರು ನಿವೃತ್ತ ಶಿಕ್ಷಕರಾಗಿದ್ದು, ಶಿರಹಟ್ಟಿ ತಾಲೂಕಿನ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಸಾಮಾಜಿಕ ಸಂಘಟನೆಗಳೊಂದಿಗೆ ಅವರ ನಿಕಟ ಸಂಬಂಧವನ್ನು ಕಾರ್ಯಕ್ರಮದಲ್ಲಿ ವಿಶೇಷವಾಗಿ ಉಲ್ಲೇಖಿಸಲಾಯಿತು.

ಇಬ್ಬರು ಸಾಧಕರನ್ನು Dr. Sangamesh Tammanagoudra ಅವರಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಂದಾ ಕಪ್ಪತ್ತನವರ ಮತ್ತು ರೇಣುಕಾ ಲಕ್ಕುಂಡಿ ಅತಿಥಿಗಳಾಗಿ ಮಾತನಾಡಿದರು. ಅಲ್ಲದೇ ಅಲ್ಲಾಸಾಬ ನದಾಫ್, ಶಿವಾನಂದ ಪರಸಣ್ಣವರ, ಗುರುಬಾಯಿ ಹುಲಸೂರ, ಶಂಕ್ರಪ್ಪ ಶಿಳ್ಳಿನ, ವಾಸುದೇವ ಕಲಾಲ, ಸುಜಾತ ಪಾಟೀಲ, ಗೀತಾ ಹಲಸೂರ, ರತ್ನಾ ಬಬಲಿಯವರ, ನಿವೇದಿತಾ ಛಬ್ಬಿ, ವೀರಮ್ಮ ಕಳಸಾಪೂರ, ಶಶಿಕಲಾ ಸಂಕದಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!