ವರ್ಕಾಡಿ ಎಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ ಓಪರೇಟಿವ್ ಸೊಸೈಟಿಯ ನೂತನ ಕಟ್ಟಡದ ಉದ್ಘಾಟನೆ ಜೂನ್-10 ರಂದು

ವರ್ಕಾಡಿ ಎಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ ಓಪರೇಟಿವ್ ಸೊಸೈಟಿಯ ನೂತನ ಕಟ್ಟಡದ ಉದ್ಘಾಟನೆಯು ದಿನಾಂಕ 10.06. 2025ನೇ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಮಾನ್ಯ ಸಹಕಾರಿ ಮಂತ್ರಿಗಳಾದ ವಿ. ಎನ್ ವಾಸವನ್ ಇವರಿಂದ ಉದ್ಘಾಟನೆಗೊಳ್ಳಲಿದೆ. ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ . ಭದ್ರತಾ ಕೊಠಡಿಯನ್ನು ಉದುಮ ಶಾಸಕ ಶ್ರೀ ಸಿ. ಎಚ್. ಕುಂಞಂಬು ಉದ್ಘಾಟಿಸಲಿದ್ದಾರೆ.

ಕೌಂಟರ್ ನ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬೇಬಿ ಬಾಲಕೃಷ್ಣನ್ ಮಾಡಲಿದ್ದಾರೆ.

ಕಾಸರಗೋಡು ಕೋ-ಒಪರೇಟಿವ್ ಸೊಸೈಟಿಯ ಡೆಪ್ಯೂಟಿ ರಿಜಿಸ್ಟರ್ ಶ್ರೀ ಚಂದ್ರನ್ .ವಿ. ಠೇವಣಿ ಸ್ವೀಕರಿಸಲಿದ್ದಾರೆ. ತುಳು ಅಕಾಡಮಿ ಅಧ್ಯಕ್ಷ ಕೆ . ಆರ್ ಜಯಾನಂದ , ಮಿಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್ ಶೆಟ್ಟಿ , ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತೀ ಎಸ್ , ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ವರ್ಕಾಡಿ ಎಗ್ರಿಕಲ್ಚರಲ್ ವೆಲ್ಫೇರ್ ಕೋ-ಒಪರೇಕಿವ್ ಸೊಸೈಟಿ ಯಾ ಅಧ್ಯಕ್ಷ ವಿಶ್ವನಾಥ ಕುದೂರು ಸ್ವಾಗತಿಸಲಿದ್ದಾರೆ. ಸೊಸೈಟಿ ಕಾರ್ಯದರ್ಶಿ ಶ್ರೀ ರವೀದ್ರ ಮಡ್ವ ವಂದನಾರ್ಪಣೆ ಗೆಯ್ಯಲಿದ್ದಾರೆ.


ಈ ಸಂದರ್ಭದಲ್ಲಿ ಸೊಸೈಟಿ ಯಾ ಸ್ಥಾಪಕ ಅಧ್ಯಕ್ಷ ಶ್ರೀ ಸದಾನಂದ ಶೆಟ್ಟಿ ಹಾಗೂ ಕಾರ್ಯದರ್ಶಿ ಡಿ. ಬೂಬ ರವರನ್ನು ಗೌರವಿಸಲಾಗುವುದು .

SHARE
Loading spinner

Leave a Reply

Your email address will not be published. Required fields are marked *

error: Content is protected !!