ಶಾಹುಲ್ ಹಮೀದ್ ತಂಗಳ್ ಸ್ಮರಣಾರ್ಥ ಪ್ರಾರ್ಥನಾ ಸಭೆ

ದುಬೈ ಮಲಬಾರ್ ಕಲಾಸಾಂಸ್ಕೃತಿಕ ವೇದಿಕೆ ವತಿಯಿಂದ ಕಾಸರಗೋಡು ಮೂಲದ ಖ್ಯಾತ ಸಮಾಜಸೇವಕ ಶಾಹುಲ್ ಹಮೀದ್ ತಂಗಳ್ ಅವರ ಸ್ಮರಣಾರ್ಥ ಪ್ರಾರ್ಥನಾ ಸಭೆಯನ್ನು ಕುಂಬಳೆ ರಾಯಲ್ ಖುಬಾ ರೆಸ್ಟೋರಂಟ್‌ನಲ್ಲಿ ಆಯೋಜಿಸಲಾಯಿತು. ಈ ಕಾರ್ಯಕ್ರಮವನ್ನು ಮಾಜಿ ಶಾಸಕ ಎಂ.ಸಿ. ಕಮರುದ್ದೀನ್ ಉದ್ಘಾಟಿಸಿ ಮಾತನಾಡಿದರು.

ಈ ವೇಳೆ ಅವರು, ಕುಂಬಳ ಸಾರ್ವಜನಿಕ ಕ್ಷೇತ್ರದಲ್ಲಿ ಶಾಹುಲ್ ಹಮೀದ್ ತಂಗಳ್ ನಿಸ್ವಾರ್ಥ ಸೇವೆ ಸಲ್ಲಿಸಿದ ವ್ಯಕ್ತಿಯಾಗಿದ್ದು, ಅವರ ಅಕಾಲಿಕ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು. ಪ್ರಾರ್ಥನಾ ಸಭೆಗೆ ಸಯ್ಯಿದ್ ಯಾಹಿಯ ತಂಗಳ್ ಹಾಗೂ ಸಯ್ಯಿದ್ ರಹೀಸ್ ತಂಗಳ್ ನೇತೃತ್ವ ವಹಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಬಳ ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಕೆ. ಆರಿಫ್ ವಹಿಸಿದ್ದರು. . ಹಿರಿಯ ಪತ್ರಕರ್ತ ಕೆ.ಎಂ. ಅಬ್ಬಾಸ್ ಆರಿಕ್ಕಾಡಿ ಸ್ಮರಣ ಭಾಷಣ ಮಾಡಿದರು.

ಇದೇ ಸಂದರ್ಭದಲ್ಲಿ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರಗಳ ಪ್ರಮುಖರಾದ ವಿ.ಪಿ. ಅಬ್ದುಲ್ ಖಾದರ್, ಟಿ.ಎಂ. ಮೂಸ, ಅಸೀಸ್ ಮೇರಿಕ್ಕೆ , ನಾಸರ್ ಚೇರ್ಕಳಂ ಸೇರಿದಂತೆ ಹಲವರು ಮಾತನಾಡಿದರು. ಶಾಹುಲ್ ತಂಗಳ್ ಅವರ ಪುತ್ರ ಹಾಶಿರ್ ತಂಗಳ್ ಹಾಗೂ ಬಂಧುಗಳು ಉಪಸ್ಥಿತರಿದ್ದರು.ದುಬೈ ಮಲಬಾರ್ ಕಲಾಸಾಂಸ್ಕೃತಿಕ ವೇದಿಕೆಯ ಪ್ರಧಾನ ಸಂಚಾಲಕ ಅಶ್ರಫ್ ಕರ್ಳ ಸ್ವಾಗತಿಸಿ, ಕೆ.ವಿ. ಯೂಸಫ್ ಧನ್ಯವಾದವಿತ್ತರು .

SHARE
Loading spinner

Leave a Reply

Your email address will not be published. Required fields are marked *

error: Content is protected !!