ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ನಗರ ವತಿಯಿಂದ ಜಿಲ್ಲಾಧ್ಯಕ್ಷರಾದ ಅಪ್ಪಿ ಎಸ್ ರವರ ನೇತೃತ್ವದಲ್ಲಿ ಮಹಿಳಾ ಮೀಸಲಾತಿಯನ್ನು ಪ್ರತ್ಯೇಕವಾಗಿ ಜಾರಿಗೊಳಿಸುವಂತೆ ಹಾಗೂ ಕ್ಷೇತ್ರ ಮರುವಿಂಗಡಣೆಯ ವಿಚಾರವನ್ನು ಕೈ ಬಿಡುವಂತೆ ಒತ್ತಾಯಿಸಿ ಪ್ರತಿಭಟನೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅಪ್ಪಿ ಮಾತನಾಡಿ , ಪ್ರಧಾನಿ ಮೋದಿ ಅವರಿಗೆ ಮಹಿಳೆಯರ ಮೇಲೆ ಗೌರವ ಇದ್ರೆ ಅವರು 2023 ರಲ್ಲಿ ಅಂಗೀಕಾರವಾದ ಮಹಿಳಾ ಮಸೂದೆಯನ್ನು ಕೂಡಲೇ ಜಾರಿ ಮಾಡಬೇಕು. ಬಿಜೆಪಿ ಮಹಿಳೆಯರು ಇವತ್ತು ಕಾಂಗ್ರೆಸ್ ವಿರೋಧಿ ಮಹಿಳೆ ಅಂತ ಹೇಳ್ತಾ ಇದ್ದಾರೆ, ಇದು ತಪ್ಪು, ಅವರಿಗೆ ನೈತಿಕತೆ ಇಲ್ಲ.ಯಾವ ಒಂದು ಬಿಲ್ ಅನ್ನು ಕೂಡ ಅದರ ಜೊತೆ ಲಿಂಕ್ ಮಾಡದೆ ಬರೀ 2023 ರಲ್ಲಿ ಅಂಗೀಕಾರವಾದ ಮಸೂದೆಯನ್ನು ಜಾರಿ ಮಾಡಬೇಕೆಂದು ಆಗ್ರಹಿಸಿದರು .
ಇನ್ನು ಕಾಂಗ್ರೆಸ್ ಪಕ್ಷದ ಪ್ರಮುಖರಾದ ಶಾಂತಲ ಗಟ್ಟಿ ಮಾತನಾಡಿ , ಮಹಿಳಾ ಮೀಸಲಾತಿ ೨೦೨೩ ಮಸೂದೆ ಅಂಗೀಕಾರ ಆಗಬೇಕು . ಕ್ಷೇತ್ರ ಮರು ವಿಂಗಡಣೆಯ ಜೊತೆಗೆ ಈ ಮಹಿಳಾ ಮೀಸಲಾತಿಯನ್ನು ಸೇರಿಸಿದ್ದು ಸರಿಯಲ್ಲ . ಬಿಜೆಪಿಯ ಈ ಕುತಂತ್ರವನ್ನು ವಿಪಕ್ಷಗಳು ವಿಫಲಗೊಳಿಸಿದೆ . ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಿಕ್ಕಿದ ಗೆಲುವಾಗಿದೆ . ಪ್ರಸ್ತುತ ಇರುವ 543 ಲೋಕ ಸಭಾ ಕ್ಷೇತ್ರಗಳಲ್ಲಿ33 ಶೇಕಡಾ ತರಲಿ . ಬೇರೆ ಬೇರೆ ರಾಜ್ಯಗಳಲ್ಲಿ ಚುನಾವಣಾ ನೀತಿ ಸಂಹಿತೆ ಇರುವ ಕಾಲದಲ್ಲಿ ಈ ಕಾಯ್ದೆ ಜಾರಿಗೊಳಿಸಿವುದು ಸರಿಯಲ್ಲ . ಮುಂಬರುವ ಮಳೆಗಾಲದ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತರಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು .
ಈ ಸಂಧರ್ಭದಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ಸ್ವರೂಪ ಎನ್ ಶೆಟ್ಟಿ, ಚಂದ್ರಕಲಾ ಡಿ ರಾವ್, ನೀತಾ ಶೈಲಾ ಡಿ ಸೋಜಾ,ಗೀತಾ ಅತ್ತಾವರ್, ಮೂಡಾ ಸದಸ್ಯೆ ಸಬಿತಾ ಮಿಸ್ಕಿತ್,ಜಿಲ್ಲಾ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ವೀಣಾ ಬೆನೆಡಿಕ್ಟ್, ಮೀನಾ ಟೆಲ್ಲಿಸ್, ಶಾಂತಲಾ ಗಟ್ಟಿ, ಗೀತಾ ಪ್ರವೀಣ್, ಅವಿಟಾ ನೊರೋನ್ಹ, ಕವಿತಾ ವಾಸು, ಸುಜಾತಾ ದೀಪಕ್, ಮಮತಾ ಶೆಟ್ಟಿ, ಅನಿತಾ, ಮೇರಿ ಸಾಂತಿಸ್, ಪ್ರಮೀಳಾ ಈಶ್ವರ್, ಕ್ಲೀಟಾ ಡಿ ಸೋಜಾ, ಅರ್ಚನಾ ಆಚಾರ್, ಅಸ್ಮಾ ಪರ್ವೀನ್, ಲಿಡಿಯಾ, ರೀಟಾ ಡಿ ಸೋಜಾ, ಮೋಹಿನಿ ರ್ ಅಮೀನ್, ಡೋರಿನ್ ಡಿ ಸೋಜಾ, ಪದ್ಮಾವತಿ, ಚಂದ್ರಾವತಿ, ಸಜನಿ, ರಶೀದಾ ಬಾನು, ಸಾರಮ್ಮ, ರಜನಿ, ನಜ್ಮಾ, ಲೂವೀಸ್ ಮೊಂತೆರೋ, ರುಕ್ಸನಾ, ನೆಬಿಸಾ, ಅಮೃತೇಶ್ವರಿ, ಸುನೀತಾ ಡಿ ಸೋಜಾ, ಫ್ಲೇವಿ ಡಿ ಸೋಜಾ, ಸುನೀತಾ, ಮಾಲತಿ ಎಸ್, ಯಶೋದಾ ಡಿ ಮುಂತಾದವರು ಉಪಸ್ಥಿತರಿದ್ದರು.