ಮಂಜೇಶ್ವರ: ಕನಿಲ ಶ್ರೀ ಭಗವತಿ ಕ್ಷೇತ್ರದ ವಾರ್ಷಿಕೋತ್ಸವ ಜಾತ್ರೆಯ ಅಂಗವಾಗಿ ಮಚ್ಚಾಂಬಾಡಿ ಪಾವೂರು ವಿಭಾಗದ ವತಿಯಿಂದ ಕ್ಷೇತ್ರಕ್ಕೆ ಅಕ್ಷಯ ಪಾತ್ರೆ (ಕೊಪ್ಪರಿಗೆ) ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಗುರಿಕಾರರಾದ ಪುರುಷೋತ್ತಮ ಗುರಿಕಾರ, ಪ್ರಸಾದ್ ಗುರಿಕಾರ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಗಣೇಶ್ ಪಾವೂರು, ಪಾವೂರು ವಿಭಾಗದ ಅಧ್ಯಕ್ಷ ಮನೋಜ್ ಕೊಪ್ಪಳ ಉಪಸ್ಥಿತರಿದ್ದರು.
ಹಾಗೂ ಜಯರಾಜ್ ಬಜಾಲ್, ಶಿವಕುಮಾರ್ ಬಳ್ಳೂರು, ಸುರೇಶ್ ಬೋಲ್ಯಾಂಗೋಡಿ, ದಿವಾಕರ ಚೌಕಿ, ಸುಧಾಮಣಿ ಅರಿಬೈಲ್, ಮಲ್ಲಿಕಾ ಬೇಕರಿ, ಸರಿತಾ ಕುಂಡಾಪು, ಲಲಿತಾ ತಾವುಡ್ಗೋಳಿ, ಚಿರಶ್ರೀ ಬೇಕರಿ, ಚಂದ್ರಾವತಿ ಬೋಲ್ಯಾಂಗೋಡಿ, ನಾರಾಯಣ ಕಳ್ಳಜೆ, ವಿನೋದ್ ವಳಚ್ಚಿಲ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.