ಮತದಾನದ ದಿನವೇ ಬೀದಿಗೆ ಬಂದ ಕಾಂಗ್ರೆಸ್ ಅಸಮಾಧಾನದ ಜ್ವಾಲೆ.ಪ್ರಚಾರಕ್ಕೆ ಆಮಂತ್ರಣ ನೀಡಿಲ್ಲ , ಕನಿಷ್ಠ ಪಕ್ಷ ಮಿಸ್ ಕಾಲ್ ನೀಡಿಲ್ಲ ತರೂರ್ ಬೇಸರ

ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ನಿಳಂಬೂರ್ ವಿಧಾನಸಭಾ ಉಪಚುನಾವಣೆಯ ಮತದಾನವು ಮಂದಗತಿಯಲ್ಲಿ ಸಾಗುತ್ತಿದ್ದು ಈ ಮಧ್ಯೆ ಕಾಂಗ್ರೆಸ್ ಪಕ್ಷದ ಅಂತ:ಕಲಹ ಬೀದಿಗೆ ಬಂದಿದೆ.

ಪಕ್ಷದ ಅಧಿಕೃತ ಅಭ್ಯರ್ಥಿ ಆರ್ಯಾಡನ್ ಸೌಕತ್ ಪರ ಕಾಂಗ್ರೆಸ್ ಸಂಸದ ಶಶಿತರೂರ್ ಪ್ರಚಾರಕ್ಕೆ ಬಂದಿಲ್ಲ ಎಂಬ ಆರೋಪ ಅವರ ಮೇಲಿದೆ. ಈ ಬಗ್ಗೆ ಸ್ವಪಕ್ಷಯ ರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ತರೂರ್ ಪ್ರಚಾರಕ್ಕೆ ಬರುವಂತೆ ತನಗೆ ಆಮಂತ್ರಣ ನೀಡಿಲ್ಲವೆಂದು ಪಕ್ಷದ ನಾಯಕರು ಕನಿಷ್ಠಪಕ್ಷ ಒಂದು ಮಿಸ್ ಕಾಲ್ ನೀಡಿಲ್ಲವೆಂದು ಹೇಳಿದ್ದಾರೆ.


ಇತ್ತೀಚೆಗೆ ಸಂಸದ ಶಶಿತರೂರ್ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಆಡಳಿತ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು,ಮೋದಿ ಅವರಿಗೆ ಭೇಷ್ ಎಂದಿದ್ದರು. ಆಪರೇಷನ್ ಸಿಂಧೂರ್ ನಂತರ ವಿದೇಶ ಪರ್ಯಟನೆಯ ಸರ್ವ ಪಕ್ಷ ನಿಯೋಗದಲ್ಲಿ ಸಂಸದ ಶಶಿತರೂರ್ ಮುಖ್ಯ ನಾಯಕರಾಗಿದ್ದರು. ಸಂಸದ ಶಶಿತರೂರ್ ಪ್ರಧಾನಿ ಮೋದಿ ಬಗ್ಗೆ ಹೊಗಳಿಕೆಯ ಮಾತುಗಳಾಡುವಾಗಲೇ ಕಾಂಗ್ರೆಸ್ ಮನೆ ಗೊಂದಲದ ಗೂಡಾಗಿತ್ತು. ಪಕ್ಷ ತೊರೆಯುತ್ತಾರೆಂಬ ಆತಂಕವಿತ್ತು.

ಪ್ರಚಾರಕ್ಕೆ ಗೈರು ಹಾಜರಾದ ಬಗ್ಗೆ ಕಾಂಗ್ರೆಸ್ ನಾಯಕರೊಳಗೆ ಭಿನ್ನ ರಾಗಗಳು ಚುನಾವಣೆಯ ದಿನವೇ ಹೊರ ಬರುತ್ತಿರುವುದು ಪಕ್ಷಕ್ಕೆ ಮುಜುಗರ ಆಗುತ್ತಿದೆ ಎಂಬುವುದು ಕೆಲ ನಾಯಕರ ವಾದ .ಪಕ್ಷದ ಪ್ರಚಾರಕ್ಕೆ ಬಾರದ ಬಗ್ಗೆ ಕೇರಳ ಪ್ರದೇಶ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸನ್ನಿ ಜೋಸೆಫ್ , ಹಿರಿಯ ಕಾಂಗ್ರೆಸ್ ನಾಯಕ ತಿರುವಂಚೂರು ರಾಧಾಕೃಷ್ಣನ್ ಸಹಿತ ಕಾಂಗ್ರೆಸ್ ನಾಯಕರು ತಮ್ಮ ಅಭಿಪ್ರಾಯದಲ್ಲಿ , ಶಶಿತರೂರ್ ಪಕ್ಷ ಸಂಸದರಾಗಿ ಅಧಿಕೃತ ಅಭ್ಯರ್ಥಿಯ ಪರ ಪ್ರಚಾರಕ್ಕೆ ಬರಬೇಕಾದುದು ಅವರ ಕರ್ತವ್ಯ ವಾಗಿದ್ದು , ಅವರಿಗೆ ಹೇಳಿಕೆ ಕೊಡುವ ಅಗತ್ಯವಿಲ್ಲ ಎಂದಿದ್ದಾರೆ.ಒಟ್ಟಿನಲ್ಲಿ ಮತದಾನದ ದಿನವೇ ಕಾಂಗ್ರೆಸ್ ಮನೆಯಲ್ಲಿ ಭಿನ್ನ ರಾಗಗಳು ಹೊರಬರುತ್ತಿರುವುದು ಮತದಾನದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ.ಎಂಬುವುದನ್ನು ಕಾಡು ನೋಡಬೇಕು .

SHARE
Loading spinner

Leave a Reply

Your email address will not be published. Required fields are marked *

error: Content is protected !!