ಕಾರ್ಕಳ:ಮಹಿಳೆಯರ ಸಬಲೀಕರಣ, ಸಮಾಜ ನಿರ್ಮಾಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ “ನಾರಿ ಶಕ್ತಿ ವಂದನಾ” ಅಭಿನಂದನಾ ಕಾರ್ಯಕ್ರಮವನ್ನು ಮೇ 17ರಂದು ಮಂಜುನಾಥ್ ಪೈ ಹಾಲ್ ಕಾರ್ಕಳದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವು ಮಧ್ಯಾಹ್ನ 3 ಗಂಟೆಯಿಂದ ಮಹಿಳಾ ಸಂಘಟನಾ ವತಿಯಿಂದ ನಡೆಯಲಿದೆ . ಕಾರ್ಯಕ್ರಮದ ಗೌರವ ಉಪಸ್ಥಿತಿಯನ್ನು ಒಡಿಯೂರು ಮಠದ ಸಾಧ್ವಿ ಶ್ರೀ ಶ್ರೀ ಮಾತಾನಂದಮಯಿ ವಹಿಸಲಿದ್ದು, ಆಶೀರ್ವಚನ ನೀಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತೆ ಸುರಭಿ ಹೊಡಿಗೆರೆ ವಾಗ್ಮಿ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಡಾ. ಸವಿತಾ ಕೊರಗ ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರು ಹಾಗೂ ಬಾಲಕಿಯರನ್ನು ಸನ್ಮಾನಿಸಿ ಅಭಿನಂದಿಸಲಾಗುವುದು.
ಕಾರ್ಯಕ್ರಮದಲ್ಲಿ ಸಾವಿತ್ರಿ ಮನೋಹರ್ , ಶ್ಯಾಮಲ ಕುಂದರ್ , ಜ್ಯೋತಿ ಪೈ ,ತನುಲ , ಪ್ರೇಮ ಸುರಿಗ, ಅಜೆಕಾರು , ಅಪ್ಸರ , ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರು ಲೈಲಾ ಥೋಮಸ್ , ಭೂಮಿ , ಅನ್ನಿ ಹೆಚ್. ಅಂಚನ್ , ಸುಧಾನ್ಯ ,ಪ್ರಣತಿ ಬಿ ಶೆಟ್ಟಿ , ಸಹಿತ ಮುಂತಾದವರು ಭಾಗವಹಿಸಲಿದ್ದಾರೆ .