ಮಂಜೇಶ್ವರ : ಅಮ್ಮ ಕಲಾವಿದೆರ್ ಕುಡ್ಲ ಅಭಿನಯಿಸುವ ‘ರಂಗ್ ದ ರಾಜೆ’ ಸುಂದರ್ ರೈ ಮಂದಾರ ನಿರ್ದೇಶಿಸಿ , ಅಭಿನಯಿಸಿದ ‘ತುಳುನಾಡ ಕಲಾ ಸಿಂಧೂರ’ ಸೋಮನಾಥ್ ಶೆಟ್ಟಿ ಮಂಗಲ್ಪಾಡಿ ರಚಿಸಿದ ,ಶಿವಾನಂದ ಶೆಟ್ಟಿ ಮಂಗಲ್ಪಾಡಿ ಸಾರಥ್ಯದಲ್ಲಿ ‘ತುಳುನಾಡ ಕಲಾ ಬಿರ್ಸೆ’ ದೀಪಕ್ ರೈ ಪಾಣಾಜೆ ಹಾಗೂ ಕಾಮಿಡಿ ಕಿಲಾಡಿ ಖ್ಯಾತಿಯ ಪಿಂಕಿ ರಾಣಿ ಅಭಿನಯಿಸುವ ಹೊಚ್ಚ ಹೊಸ ನಾಟಕ ‘ಆನ್ ಮಗೆ’ ಜುಲೈ 22 ರಂದು ಆರಿಕ್ಕೋಡಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬೆಳಗ್ಗೆ 10 ಗಂಟೆಗೆ ಶುಭ ಮುಹೂರ್ತ ಗೊಳ್ಳಲಿದೆ.
ಈ ಹೊಸ ನಾಟಕದ ಸಂಗೀತ ವನ್ನು ರವಿ ಸುಂಕದಕಟ್ಟೆ, ಪ್ರಸಾದನ ಪ್ರಸಾದ್ ಕೊಯಿಲ ಹಾಗೂ ಸಮಗ್ರ ನಿರ್ವಹಣೆಯಲ್ಲಿ ರವಿ ಎಂ ಎಸ್ ವರ್ಕಾಡಿ ಸಹಕರಿಸಿದ್ದಾರೆ.