ಮಂಗಳೂರಿನಲ್ಲಿ ‘ತರವಾಡ್’ ಬ್ಯಾರಿ ಕಾದಂಬರಿ ಅವಲೋಕನ ಕಾರ್ಯಕ್ರಮ

ಮಂಗಳೂರು:ಬ್ಯಾರಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ (ರಿ) ಮಂಗಳೂರು ವತಿಯಿಂದ ಬ್ಯಾರಿ ಭಾಷಾ ವೈವಿಧ್ಯತೆ ಮತ್ತು ಪುರಾತನ ಬ್ಯಾರಿ ಸಂಸ್ಕೃತಿ ಸಂಪ್ರದಾಯಗಳ ಉಲ್ಲೇಖಗಳಿಗೆ ಸಾಕ್ಷಿಯಂತಿರುವ ಮರ್ಹೂಂ ಯು.ಎ. ಕಾಸೀಮ್ ಉಳ್ಳಾಲ್‌ರ ತರವಾಡ್ ಬ್ಯಾರಿ ಕಾದಂಬರಿಯ ಅವಲೋಕನ ಕಾರ್ಯಕ್ರಮ ನಗರದ ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಂಗಣದಲ್ಲಿ ನಡೆಯಿತು.ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಎಂ. ಫಾರೂಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾದಂಬರಿಯನ್ನು ಅವಲೋಕಿಸಿದ ಕತೆಗಾರ ಮುನವ್ವರ್ ಜೋಗಿಬೆಟ್ಟು ಮರ್ಹೂಂ ಯು.ಎ. ಕಾಸಿಮ್ ಉಳ್ಳಾಲ್ ತನ್ನ ಜೀವನಾನುಭವವನ್ನು ಈ ಕಾದಂಬರಿಯಲ್ಲಿ ದಟ್ಟವಾಗಿ ಚಿತ್ರಿಸಿದ್ದಾರೆ.
ಅವರು ಬಳಸಿದ ಭಾಷೆ ಅದ್ಭುತ. ಬ್ಯಾರಿ ಮುಸ್ಲಿಮರ ಮೂರು ತಲೆಮಾರುಗಳ ಬದುಕನ್ನು ಕಟ್ಟಿಕೊಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದರು.
ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ ಪ್ರತಿಕ್ರಿಯೆ ನೀಡಿದರು.ಬ್ಯಾರಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಬ್ಯಾರಿ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್., ಯು.ಎ. ಕಾಸೀಮ್‌ರ ಪುತ್ರ ಯುವ ಸಾಮಾಜಿಕ ಕಾರ್ಯಕರ್ತ ಝುಲ್ಫೀಕರ್ ಕಾಸೀಮ್ ಭಾಗವಹಿಸಿದ್ದರು.
ಲೇಖಕರಾದ ಹಂಝ ಮಲಾರ್, ಹುಸೈನ್ ಕಾಟಿಪಳ್ಳ, ಅಬ್ದುಲ್ ಖಾದರ್ ಕುತ್ತೆತ್ತೂರು, ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಎ.ಕೆ.ಕುಕ್ಕಿಲ, ಶಂಶೀರ್ ಬುಡೋಳಿ, ಸಲೀಂ ಬೋಳಂಗಡಿ, ಎಚ್.ಆರ್.ಅರ್ಕುಳ, ಬಿ.ಎಂ. ಕಿನ್ಯ, ಬಶೀರ್ ಅಹ್ಮದ್ ಬೆಳ್ಳಾಯಾರು, ಸಫ್ರಾಝ್ ಆಲಾಡಿ, ಫಾತಿಮಾ ರಲಿಯಾ ಹೆಜಮಾಡಿ, ಸಿಹಾನಾ ಬಿ.ಎಂ., ಝುಲೇಖಾ ಮುಮ್ತಾಝ್, ಆಯಿಶಾ ಯು.ಕೆ., ಸೆಮೀರಾ ಕೆ.ಎ. ಕಡಬ, ತನ್ಸೀರಾ ಆತೂರು, ಆಯಿಶಾ ಪೆರ್ನೆ, ಮುಝಾಹಿದಾ ಮೈಕಾಲ, ನಸೀಮಾ ಸಿದ್ದಕಟ್ಟೆ ಮತ್ತಿತರರು ಕಾದಂಬರಿಯ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.

ಕೇಂದ್ರದ ಪ್ರಧಾನ ಕಾರ್ಯದರ್ಶಿ ಬಿ.ಎ. ಷಂಶುದ್ದೀನ್ ಮಡಿಕೇರಿ, ಪಿ. ಮೂಸಬ್ಬ ಬ್ಯಾರಿ ಜೋಕಟ್ಟೆ, ಎಂ.ಎಚ್. ಮಯ್ಯದ್ದಿ, ಸಿತಾರ್ ಮಜೀದ್, ಎನ್.ಇ. ಮುಹಮ್ಮದ್, ಯಾಕೂಬ್, ಎಸ್. ಅಬ್ದುಲ್ ರಝಾಕ್ ಸೂರಿಂಜೆ, ಎಂ. ಅಬ್ದುಲ್ ಬಶೀರ್ ಮೊಂಟೆಪದವು ಮತ್ತಿತರರು ಪಾಲ್ಗೊಂಡಿದ್ದರು.

ಅಭಿವೃದ್ಧಿ ಕೇಂದ್ರದ ಟ್ರಸ್ಟಿ ಎಂ.ಬಿ. ಅಬ್ದುಲ್ ನಝೀರ್ ಮಠ ಸ್ವಾಗತಿಸಿದರು. ಉಪಾಧ್ಯಕ್ಷ ಬಿ.ಎ.ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!