ಕಾಸರಗೋಡು : ಕೇರಳ ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯ ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭ ಕಾರ್ಯಕ್ರಮದಲ್ಲಿ ಭಾರತಮಾತೆಯ ಭಾವಚಿತ್ರಇರಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಕಾರ್ಯಕ್ರಮವನ್ನು ಬಹಿಷ್ಕರಿಸಿದ ಶಿಕ್ಷಣ ಸಚಿವ ಶಿವನ ಕುಟ್ಟಿ ಅವರ ನಡೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷೆ ತೀವ್ರವಾಗಿ ಖಂಡಿಸಿದ್ದಾರೆ.
ಕಮ್ಯುನಿಸ್ಟ್ ಆಶಯಕ್ಕೆ ಭಾರತೀಯ ಮಾನ ಬಿಂದುಗಳನ್ನು ಗೌರವಿಸಲಾಗುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ ಅವರು ಇದು ಕಮ್ಯೂನಿಸ್ಟರ ಸಂಕುಚಿತ ಚಿಂತನೆಯ ಪ್ರತೀಕವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತಾಂಬೆಯ ಚಿತ್ರವನ್ನು ಕೇಸರಿ ಧ್ವಜ ಹಿಡಿದ ವನಿತೆ ಎಂದು ಬಣ್ಣಿಸಿದ ಸಚಿವರ ಹೇಳಿಕೆ ಶ್ರೀ ವಿರುದ್ಧದ ಕಮ್ಯುನಿಸ್ಟರ ಧೋರಣೆಗೆ ಸಾಕ್ಷಿಯಾಗಿದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ಎಂ ಎಲ್ ಅಶ್ವಿನಿ ಟೀಕಿಸಿದ್ದಾರೆ.
1947 ರಲ್ಲಿ ಭಾರತವನ್ನು18 ತುಂಡುಗಳಾಗಿ ವಿಭಜಿಸಬೇಕೆಂದು ಬಯಸಿ ಸ್ವಾತಂತ್ರ್ಯ ದಿನದಂದು ಕರಿ ದಿನಾಚರಣೆ ಆಚರಿಸಿದವರು ಕಮ್ಯುನಿಷ್ಟರು ಎಂದು ಅಶ್ವಿನಿ ಆರೋಪಿಸಿದರು. ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಬೇಸತ್ತ ಜನರನ್ನು ಪೀಣ ರಾಯಿ ಸರಕಾರ ವಿನಾಕಾರಣ ಭಾರತಾಂಬೆಯ ಚಿತ್ರದ ವಿವಾದವನ್ನು ಮಾಡುತ್ತಿದೆ ಎಂದು ಆರೋಪಿಸಿದರು.
ವಿದೇಶದಲ್ಲಿ ಉದ್ಭವಿಸಿದ ಕಮ್ಯುನಿಸ್ಟ್ ಆಶಯಕ್ಕೆ ಭಾರತಾಂಬೆಯನ್ನು ಅಂಗೀಕರಿಸಿ ಗೌರವಿಸಲು ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ ಅವರ ಈ ವರ್ತನೆಯ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ಇಂತಹ ದೇಶ ವಿರೋಧೀ ಚಿಂತನೆ ಇರುವ ಕಮಿನಿಸ್ಟರನ್ನು ತಿರಸ್ಕರಿಸುವ ಕಾಲ ದೂರವಿಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.