ಶಾಸಕ ವೇದವ್ಯಾಸ ಕಾಮತ್ ಚಾಲನೆ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 37ನೇ ಮರೋಳಿ ವಾರ್ಡಿನ ಅಡು ಮರೋಳಿ ಬಳಿ 20 ಲಕ್ಷ ರೂ. ವಿಶೇಷ ಅನುದಾನದಲ್ಲಿ ತಡೆಗೋಡೆ ನಿರ್ಮಾಣವಾಗಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಭೂಮಿ ಪೂಜೆ ನಡೆಯಿತು.
ನಂತರ ಮಾತನಾಡಿದ ಶಾಸಕರು, ಕಳೆದ ಮಳೆಗಾಲದಲ್ಲಿ ಈ ಭಾಗದ ಗೋಡೆಯು ಸಂಪೂರ್ಣ ಹಾನಿಯಾಗಿದ್ದು ಇದೀಗ ಪರಿಹಾರ ನಿಧಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಸುಮಾರು 300 ರಿಂದ 400 ಕೋಟಿಗೂ ಹೆಚ್ಚು ಹಾನಿಯಾಗಿದ್ದರೂ ಅಗತ್ಯ ಪ್ರಮಾಣದ ಪರಿಹಾರ ರಾಜ್ಯ ಸರ್ಕಾರದಿಂದ ಬಂದಿಲ್ಲದಿರುವುದು ಬೇಸರದ ಸಂಗತಿ. ಇತ್ತೀಚಿಗೆ ಇಡೀ ರಾಜ್ಯಕ್ಕೆ ಮಳೆ ಪರಿಹಾರ ನಿಧಿ ನೀಡಿದ್ದು ಅದರಲ್ಲಿ ನಮ್ಮ ಪಾಲಿಕೆ ವ್ಯಾಪ್ತಿಗೆ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕರ ಹೆಸರಿನಲ್ಲಿ ರಾಜ್ಯ ಸರಕಾರದಿಂದ 10 ಕೋಟಿ ಪರಿಹಾರ ನಿಧಿ ಬಿಡುಗಡೆಯಾಗಿದ್ದು ಅದರಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಈ ವೇಳೆ ಪ್ರಮುಖರಾದ ಕಿರಣ್ ಮರೋಳಿ, ಮನೋಹರ್ ಶೆಟ್ಟಿ ಕದ್ರಿ, ಲೂಸಿ ಪಿಂಟೋ, ಗ್ರಿಪ್ಪೆನ್, ಎಲಿಜ, ಮಧು ಕುಮಾರ್, ನವೀನ್, ಡೇವಿಡ್, ಸಾವಿತ್ರಿ, ಶರತ್, ತುಷಾರ, ಹರಿಣಾಕ್ಷ, ಅಕ್ಷಿತ್, ಯೋಗೇಶ್ವರಿ, ಜಗದೀಶ್ ಶೆಟ್ಟಿ, ರುಕ್ಮಯ್ಯ, ರಾಘು, ಅರುಣ್ ಶೆಟ್ಟಿ, ಮನೋಹರ್ ಶೆಟ್ಟಿ ಕದ್ರಿ, ರಾಜೇಶ್ ಅಲಂಗಾರ್, ಶರತ್, ಮಾಲತಿ, ಸುಲೋಚನಾ, ವತ್ಸಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.