ಕರ್ನಾಟಕ ಸರ್ಕಾರ ರಾಜ್ಯ ಕಂದಾಯ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆ ನಡೆಸಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಒಟ್ಟು 27 ತಹಶೀಲ್ದಾರ್ ಗ್ರೇಡ್-1 ಮತ್ತು ಗ್ರೇಡ್-2 ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿದೆ.
ಈ ಕುರಿತು ಬುಧವಾರ ರಾತ್ರಿ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಕಡಬ ತಾಲೂಕಿನ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಭಾಕರ ಖಜೂರೆ ಅವರನ್ನು ಕಮಲಾಪುರ ತಾಲ್ಲೂಕಿಗೆ ವರ್ಗಾವಣೆ ಮಾಡಲಾಗಿದೆ.
ಕಮಲಾಪುರ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೊಹ್ಮದ್ ಮೊಹಸೀನ್ ಅವರ ಸ್ಥಾನಕ್ಕೆ ಪ್ರಭಾಕರ ಖಜೂರೆ ಅವರನ್ನು ನಿಯೋಜಿಸಲಾಗಿದೆ.
ಇನ್ನೊಂದೆಡೆ, ಕಡಬ ತಾಲ್ಲೂಕಿನ ತಹಶೀಲ್ದಾರ್ ಹುದ್ದೆಗೆ ಸರ್ಕಾರ ಸದ್ಯ ಯಾರನ್ನೂ ನೇಮಕ ಮಾಡದೇ ಹುದ್ದೆಯನ್ನು ಖಾಲಿ ಉಳಿಸಿದೆ.
ರಾಜ್ಯ ಮಟ್ಟದಲ್ಲಿ ಕೈಗೊಂಡಿರುವ ಈ ವರ್ಗಾವಣೆ ಪ್ರಕ್ರಿಯೆ ಆಡಳಿತ ಸುಧಾರಣೆ ಹಾಗೂ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿದೆ ಎಂದು ತಿಳಿದುಬಂದಿದೆ.