ಡಾ. ವಾಮನ್ ರಾವ್ ಬೇಕಲ್ ದಂಪತಿಗೆ “ಕರುನಾಡ ಕನ್ನಡ ಗಡಿನಾಡು ಪೋಷಕ ರತ್ನ ಪ್ರಶಸ್ತಿ-2026”


ಕಾಸರಗೋಡು : ಡಾ ಎಸ್. ಡಿ. ಮುಡೆಣ್ಣವರ, ಸ್ಥಾಪಕ ರಾಜ್ಯಾಧ್ಯಕ್ಷರು ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗ (ರಿ.)ಇವರ ಸಾರತ್ಯದಲ್ಲಿ, 25.5.2026ರಂದು ಹಾವೇರಿಯಲ್ಲಿ “ಡಾ. ಅಂಬೇಡ್ಕರ್ ಸಭಾ ಭವನ ಹಾವೇರಿ ಇಲ್ಲಿ ಕರ್ನಾಟಕ ರಾಜ್ಯ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿ ಯಾಗಿ ನಡೆಯಿತು. ಕರ್ನಾಟಕ ವಿಧಾನ ಪರಿಷತ್ತು ಸಭಾಧ್ಯಕ್ಷರಾದ ಬಸವರಾಜ್ ಹೊರಟ್ಟಿಯವರು ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದರು. ಹಲವು ಶಾಸಕರು, ಸಾಹಿತಿ, ಕನ್ನಡ ಗಣ್ಯಾತಿಗಣ್ಯರು ಭಾಗವಹಿಸಿದ್ದರು. ಹಾವೇರಿ ಕನ್ನಡ ಸಾಹಿತ್ಯ ಪರಿಷತ್ತು, ವಿವಿಧ ಇಲಾಖೆ ಮುಖ್ಯಸ್ಥರು, ವಿದ್ಯಾ ನಿಲಯಗಳು, ಕವಿ, ಸಾಹಿತಿಗಳು ಬಾಗಿಗಳಾಗಿದ್ದರು. ಅದ್ದೂರಿ ಮೆರವಣಿಗೆ, ಉದ್ಘಾಟನೆ, ಪುಸ್ತಕ ಬಿಡುಗಡೆ ಗೊಂಡಿತು. ವಿವಿಧ ವಿಚಾರ ಗೋಷ್ಠಿ, ಬೇರೆ ಬೇರೆ ಸಭಾ ಅಂಗಣದಲ್ಲಿ ನಡೆಯಿತು.


ಈ ಸಮ್ಮೇಳನ ದಲ್ಲಿ ಗಡಿನಾಡು ಕಾಸರಗೋಡಿನಲ್ಲಿ ಕಳೆದ 25ವರ್ಷಗಳಿಂದ ನಿರಂತರ ಕನ್ನಡ ಕಾವಲು ಬಟರಾಗಿ, ಕನ್ನಡ ಉಳಿಸಿ ಬೆಳೆಸುವ ಕಾಯಕದಲ್ಲಿ ತನ್ನ ಮನೆಯನ್ನೇ ಕನ್ನಡ ಭವನ ವನ್ನಾಗಿಸಿ ಕನ್ನಡ ಭವನದಲ್ಲಿ ಕರ್ನಾಟಕದಿಂದ ಕಾಸರಗೋಡಿಗೆ ಆಗಮಿಸುವ ಸಾಹಿತ್ಯ ಸಾಂಸ್ಕೃತಿಕ ರಾಯಭಾರಿಗಳಿಗೆ ಉಚಿತ ವಸತಿ -ದಾಸೋಹ ನೀಡುವ ಮೂಲಕ ಕರ್ನಾಟಕದಲ್ಲಿ ಮನೆ ಮಾತಾಗಿರುವ ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ -sandya ರಾಣಿ ದಂಪತಿಗಳಿಗೆ ಸಮ್ಮೇಳನ ದಲ್ಲಿ “ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗ ರಾಜ್ಯಾಧ್ಯಕ್ಷ ಡಾ. ಎಸ್. ಡಿ. ಮುಡೆಣ್ಣವರ, ಕರ್ನಾಟಕ ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ್ ಹೊರಟ್ಟಿ, ಸಮ್ಮೇಳನ ಸರ್ವಾಧ್ಯಕ್ಷ ಶ್ರೀ ಜಿ. ಎಮ್ ಓಂಕಾರಣ್ಣನವರ ಮುಂತಾದ ಗಣ್ಯಾತಿಗಣ್ಯ ರನೇಕರ ಸಮಾರೋಪ ಸಮಾರಂಭ ದಲ್ಲಿ ವಾಮನ್ ರಾವ್ ದಂಪತಿಗಳಿಗೆ ” ಕರುನಾಡ ಕನ್ನಡ ಗಡಿನಾಡು ಪೋಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಪ್ರಶಸ್ತಿ ಗಡಿನಾಡು ಕಾಸರಗೋಡಿಗೆ ಸಂದ ಗೌರವ ಎಂಬುದಾಗಿ ಡಾ. ವಾಮನ್ ರಾವ್ ಬೇಕಲ್ ಪ್ರತಿಕ್ರಿಯಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!