ಸೂರಜ್ ಸಾಗರ್ ಕುಂಪಲ ನೇತೃತ್ವದ ‘ಆಸರೆ ಬಳಗ ಕುಂಪಲ’ ವತಿಯಿಂದ ದ್ವಿತೀಯ ವರ್ಷದ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ

ಸೂರಜ್ ಸಾಗರ್ ಕುಂಪಲ ನೇತೃತ್ವದ ‘ಆಸರೆ ಬಳಗ ಕುಂಪಲ’ ವತಿಯಿಂದ ದ್ವಿತೀಯ ವರ್ಷದ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಕುಂಪಲ ಬಾಲಕೃಷ್ಣ ಮಂದಿರ ವಠಾರದಲ್ಲಿ ನಡೆಯಿತು.

ಬ್ಯಾಂಕಾಕ್ ನ ಯುವ ಉದ್ಯಮಿ ಬಿಪಿನ್ ರೈ ,ಸುಧೀರ್ ನಾಯಕ್ ದುಬೈ , ಉದ್ಯಮಿ ಕೀರ್ತನ್ ತುಡರ್, ಪ್ರವೀಣ್ ಸುವರ್ಣ ಬಗಂಬಿಲ ವಿಗ್ನೇಶ್ವರ ಟ್ರಾನ್ಸ್ ಪೋರ್ಟ್ ಚಿತ್ರದುರ್ಗ, ಈಶ್ವರಿ ಬಿಲ್ಡರ್ಸ್ ಮಾಲಕ ನಿಶಾನ್ ಪೂಜಾರಿ ಸಹಕಾರದೊಂದಿಗೆ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಸ್ಥಳೀಯ ಶಾಲಾ ಮುಖ್ಯೋಪಾಧ್ಯಾಯಿನಿ ಚಂದ್ರಕಲಾ ಎಸ್. ಅವರಿಗೆ ಆಸರೆ ಬಳಗದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಆಸರೆ ಬಳಗದ ಇಂತಹ ಸಮಾಜಮುಖಿ ಕಾರ್ಯಗಳು ಇತರರಿಗೆ ಮಾದರಿಯಾಗಿವೆ. ಬಡ ಮತ್ತು ವಿಕಲಾಂಗ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಇಂಡಿಗೋ ಮತ್ತು ಜೆಟ್ ಏರ್ ವೇಸ್ ನ ನಿವೃತ್ತ ಏರ್ ಪೋರ್ಟ್ ಮ್ಯಾನೇಜರ್ ಅರ್ಚನಾ ಸಚಿತ್, ಯಥಾರ್ಥ್ ಸೋಶಿಯಲ್ ಸಂಸ್ಥಾಪಕ ಈಶ್ವರ್ ಪ್ರಸಾದ್ ಶೆಟ್ಟಿ, ತುಡರ್ ಸಂಸ್ಥೆಯ ಸಂಸ್ಥಾಪಕ ಕೀರ್ತನ್ ಪೂಜಾರಿ, ಈಶ್ವರಿ ಬಿಲ್ಡರ್ಸ್ ಮಾಲಕ ನಿಶಾನ್ ಪೂಜಾರಿ,ಆಸರೆ ಬಳಗ ಕುಂಪಲದ ಗೌರವಾಧ್ಯಕ್ಷ ಸಚಿನ್ ಕುಮಾರ್ ಅಬುದಾಬಿ, ಬಾಲಕೃಷ್ಣ ಮಂದಿರದ ಕಾರ್ಯದರ್ಶಿ ದೀಕ್ಷಿತ್ ನಿಸರ್ಗ, ಬಿಜೆಪಿ ಮುಖಂಡ ಹರೀಶ್ ಅಂಬ್ಲಮೊಗರು, ಆಸರೆ ಬಳಗ ಕುಂಪಲದ ಸಂಸ್ಥಾಪಕ ಸೂರಜ್ ಸಾಗರ್, ಚೇತನ್ ಶೆಟ್ಟಿ, ಅನುಷ್ ಗಟ್ಟಿ, ಪ್ರೀತೀಶ್ ಶೆಟ್ಟಿ, ಹರಿ ಪ್ರಸಾದ್ ಬಗಂಬಿಲ, ಸುಶಾಂತ್ ಚೂಚು, ನೂತನ್, ಭವಿಷ್ ಕಿನ್ಯ, ಯಜ್ಞಶ್, ಮನೀಶ್ , ಕೌಶಿಕ್ ರತೀಶ್ ಮೂಡಿಗೆರೆ ಸೇರಿದಂತೆ ಸಂಘಟನೆಯ ಪ್ರಮುಖರು ಮತ್ತಿತರರು ಉಪಸ್ಥಿತರಿದ್ದರು. ಪ್ರವೀಣ್ ಎಸ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು‌.

SHARE
Loading spinner

Leave a Reply

Your email address will not be published. Required fields are marked *

error: Content is protected !!