ಮಂಜನಾಡಿ, ಜೂ. 9: ಎಸ್‌ಎಂಎ ಮಂಜನಾಡಿ ರೀಜನಲ್ ಸಮಿತಿಯ ವತಿಯಿಂದ “ಮೊಹಲ್ಲಾ ಎಂಪವರ್‌ಮೆಂಟ್ ಕ್ಲಾಸ್” ಹಾಗೂ “ಪ್ರತಿಭಾ ಪುರಸ್ಕಾರ” ಕಾರ್ಯಕ್ರಮವು ಮಂಜನಾಡಿಯ ಅಲ್-ಮದೀನಾ ಶರಫುಲ್ ಉಲಮಾ ಆಡಿಟೋರಿಯಂನಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಅಲ್-ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಉದ್ಘಾಟಿಸಿದರು. ಅಲ್-ಮದೀನಾ ಶರೀಯತ್ ಕಾಲೇಜಿನ ಪ್ರಾಂಶುಪಾಲ ಸೈಯ್ಯದ್ ಉಹೈಸಿ ಸಖಾಫಿ ಅವರು ದುಆ ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಎಸ್‌ಎಂಎ ಮಂಜನಾಡಿ ರೀಜನಲ್ ಸಮಿತಿಯ ಅಧ್ಯಕ್ಷ ಹಾಜಿ ಎನ್.ಎಸ್. ಕರೀಂ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಅಭಿವೃದ್ಧಿಯಲ್ಲಿ ಶಿಕ್ಷಣದ ಮಹತ್ವವನ್ನು ಒತ್ತಿಹೇಳಿದರು. ಯುವಜನತೆ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಎರಡರಲ್ಲೂ ಉತ್ತಮ ಸಾಧನೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ನಡೆದ ಮೊಹಲ್ಲಾ ಎಂಪವರ್‌ಮೆಂಟ್ ಕ್ಲಾಸ್ ಅನ್ನು ಅನಸ್ ಅಮಾನಿ ಪುಷ್ಪಗಿರಿ ನಡೆಸಿಕೊಟ್ಟು, ಸಮುದಾಯದ ಸಬಲೀಕರಣ ಹಾಗೂ ಸಾಮಾಜಿಕ ಜವಾಬ್ದಾರಿಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅಲ್-ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ನಿರ್ದೇಶಕ ಇಸ್ಮಾಯಿಲ್ ಅಂಜಾದಿ, ಎಸ್‌ಎಂಎ ದೇರಳಕಟ್ಟೆ ರೀಜನಲ್ ಅಧ್ಯಕ್ಷ ಅಬ್ಬಾಸ್ ಮದ್ಪಾಡಿ, ಇಬ್ರಾಹೀಂ ಅಹ್ಸನಿ, ಅಬ್ಬಾಸ್ ಹಾಜಿ ತೌಡುಗೋಳಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಕೆ.ಎಂ.ಕೆ. ಮಂಜನಾಡಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಮದನಿ ನೆಕ್ಕರೆ ವಂದಿಸಿದರು.