ಕುರುಡಪದವು: ಎ ಯು ಪಿ ಶಾಲೆ ಕುರುಡಪದವಿನಲ್ಲಿ ವಾಚನಾ ದಿನದ ಔಪಚಾರಿಕ ಉದ್ಘಾಟನೆಯು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷರಾದ ಬಷೀರ್ ಸಾಪ್ಟ್ಕೋ ವಹಿಸಿದ್ದರು.ವಿಧ್ಯಾರ್ಥಿನಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀ ಗಿರೀಶ್ ಸರ್ ವಾಚನ ದಿನದ ಪ್ರಾಸ್ತಾವಿಕ ನುಡಿಗಳಾಡುದರೊಂದಿಗೆ ಅಥಿತಿಗಳೂ ಸೇರಿ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು.ಸತ್ಯ ಸಾಯಿ ಲೋಕ ಸೇವಾ ಶಾಲೆ ಅಳಿಕೆ ಇಲ್ಲಿನ ನಿವೃತ್ತ ಗಣಿತ ಅಧ್ಯಾಪಕರಾದ ಶ್ರೀ ಉದನೇಶ್ವರ ಭಟ್ ಅಳಿಕೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಓದು ನಮ್ಮ ಜೀವನಕ್ಕೆ ಅತೀ ಅಗತ್ಯ.ಒಳ್ಳೆಯ ಸಾಹಿತ್ಯವನ್ನು ಓದುವುದರಿಂದ ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಲು ಸಾಧ್ಯವಾಗುವುದು ಮಾತ್ರವಲ್ಲದೆ , ಸಂಸ್ಕಾರಯುತ ಜೀವನ ನಮ್ಮದಾಗುತ್ತದೆ.
ಎಂದರು.ಅಧ್ಯಾಪಕರಾದ ಶ್ರೀ ಪ್ರಶಾಂತ್ ಕುಮಾರ್ ಅಮ್ಮೇರಿಯವರು ವಾಚನ ದಿನದ ಪ್ರತಿಜ್ಞೆಯನ್ನು ಮಕ್ಕಳಿಗೆ ಬೋಧಿಸಿದರು.ನಂತರ ಕೇರಳ ಗ್ರಂಥ ಶಾಲಾ ನಿರ್ಮಾಪಕರಾದ ಪಿ.ಎನ್.ಪಣಿಕ್ಕರ್ ಅವರ ಜೀವನ ಚರಿತ್ರೆಯನ್ನು ಒಳಗೊಂಡ ವೀಡಿಯೋವನ್ನು ಮಕ್ಕಳಿಗೆ ತೋರಿಸಲಾಯಿತು.ಮಜಿಬೈಲು ಶಾಲಾ ಅಧ್ಯಾಪಕರಾದ ಶ್ರೀ ದೇವಾನಂದ ಸರ್ ಬರೆದ, ಓದಿನ ಮಹತ್ವಕ್ಕೆ ಸಂಬಂಧಪಟ್ಟ ಹಾಡನ್ನು ಮಕ್ಕಳಿಗೆ ಕೇಳಿಸಲಾಯಿತು.
ಉದ್ಘಾಟಕರಾದ ಶ್ರೀ ಉದನಂತೇಶ್ವರ ಭಟ್ ಸರ್ ಅವರನ್ನು ಶಾಲಾ ಮುಖ್ಯೋಪಾಧ್ಯಾಯ,ಅಧ್ಯಾಪಕರು ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ, ಅಧ್ಯಕ್ಷೆ ಸೇರಿ, ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಸಭಾಧ್ಯಕ್ಷರಾದ ಬಷೀರ್ ಸಾಪ್ಟ್ಕೋ ಅಧ್ಯಕ್ಷೀಯ ನುಡಿಗಳಾಡುದರೊಂದಿಗೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ರಕ್ಷಕ-ಶಿಕ್ಷಕ ಅಧ್ಯಕ್ಷೆಯಾದ ಶ್ರೀಮತಿ ಹಸೀನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಅಧ್ಯಾಪಿಕೆಯಾದ ದೀಕ್ಷಾ ಧನ್ಯವಾದ ಸಮರ್ಪಿಸಿದರು.ಅಧ್ಯಾಪಕರಾದ ಶ್ರೀ ಸತೀಶ್ ಸುವರ್ಣ ಸರ್ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಶಾಲಾ ಅಧ್ಯಾಪಕರಾರ ಶ್ರೀ ಅಬ್ದು ರಹೀಂ, ಯಶಸ್, ದೀಕ್ಷಿತ್, ಅಧ್ಯಾಪಿಕೆಯರಾದ ಶ್ರೀಮತಿ ಹರ್ಷಿತಾ, ಅರ್ಚನಾ, ಮೋಹಿನಿ, ಶಾಲಾ ಸಿಬ್ಬಂದಿ ಚಿದಾನಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಉದ್ಘಾಟಕರಾದ ಶ್ರೀ ಉದನಂತೇಶ್ವರ ಭಟ್ ಸರ್ ತಮ್ಮ ವತಿಯಿಂದ ಎಲ್ಲರಿಗೂ ಸಿಹಿತಿಂಡಿ ವಿತರಿಸಿದರು.ನಂತರ ಮಕ್ಕಳು ಪುಸ್ತಕ ಪ್ರದರ್ಶನವನ್ನು ವೀಕ್ಷಿಸುವುದರೊಂದಿಗೆ , ಗ್ರಂಥಾಲಯದಿಂದ ಒಂದೊಂದು ಪುಸ್ತಕವನ್ನು ಪಡೆದುಕೊಂಡರು.