ಕುರುಡಪದವು ಎಯುಪಿ ಶಾಲೆಯಲ್ಲಿ ವಿಶ್ವ ಯೋಗ ದಿನ ಆಚರಣೆ

ಕುರುಡಪದವು : ಪ್ರತಿ ವರ್ಷ ಜೂನ್ 21ರಂದು ವಿಶ್ವ ಯೋಗ ದಿನವನ್ನು ಆಚರಿಸಲಾಗುತ್ತದೆ.ಇದರ ಭಾಗವಾಗಿ ಎ ಯು ಪಿ ಶಾಲೆ ಕುರುಡಪದವಿನಲ್ಲಿ ಯೋಗ ಪ್ರಾತ್ಯಕ್ಷಿಕೆ ನಡೆಸಲಾಯಿತು.ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀ ಗಿರೀಶ್ ಸರ್ ಯೋಗದ ಮಹತ್ವವನ್ನು ತಿಳಿಸುವುದ ರೊಂದಿಗೆ, ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು.

ಎ ಯು ಪಿ ಶಾಲೆ ಕುರುಡಪದವಿನ ನಿವೃತ್ತ ಅಧ್ಯಾಪಕ ಶ್ರೀ ಕೆ. ಕೃಷ್ಣ ಭಟ್ ಇವರು ಮಕ್ಕಳಿಗೆ ಸರಳ ಯೋಗಗಳನ್ನು ಮಕ್ಕಳಿಗೆ ಪರಿಚಯಿಸಿದರು.ಶಾಲಾ ಸಭಾಂಗಣದಲ್ಲಿ ನಡೆದ ಯೋಗ ಪ್ರಾತ್ಯಕ್ಷಿಕೆಯಲ್ಲಿ ಶಾಲೆಯ ಎಲ್ಲಾ ಮಕ್ಕಳು ,ಶಾಲಾ ಅಧ್ಯಾಪಕ-ಅಧ್ಯಾಪಿಕೆಯರು ಅತ್ಯುತ್ಸಾಹದಿಂದ ಭಾಗಿಗಳಾದರು.ಕಾರ್ಯಕ್ರಮದ ಕೊನೆಯಲ್ಲಿ ಶಾಲಾ ಶಿಕ್ಷಕಿ ಶ್ರೀಮತಿ ಹರ್ಷಿತಾ ಕಾರ್ಯಕ್ರಮಕ್ಕೆ ಧನ್ಯವಾದವಿತ್ತರು.

SHARE
Loading spinner

Leave a Reply

Your email address will not be published. Required fields are marked *

error: Content is protected !!