ಲೋಬೋ ಫೌಂಡೇಶನ್ ನಿಂದ ಒಲವಿನಹಳ್ಳಿ ಆಶ್ರಮಕ್ಕೆ 1ಲಕ್ಷದ ದೇಣಿಗೆ

ಉಳ್ಳಾಲ :ಜಾನ್ ವಿಲ್ಸನ್ ಲೋಬೋ ನೇತೃತ್ವದಲ್ಲಿ ನಿರ್ಮಿಸುತ್ತಿರುವ ವೇಳ್ ಘಡಿ ಕೊಂಕಣಿ ಸಿನಿಮಾದ ಕಲಾವಿದರು ಹಾಗೂ ತಂತ್ರಜ್ಞರ ತಂಡ ಕಿನ್ಯ ಗ್ರಾಮದ ಒಳವಿನಹಳ್ಳಿ ಅಶ್ರಮಕ್ಕೆ ಭೇಟಿನಿಡಿದರು.
ವೇಳ್ ಘಡಿ ಕೊಂಕಣಿ ಸಿನಿಮಾ ತಂಡದ ವತಿಯಿಂದ ಅಶ್ರಮದ ನಿವಾಸಿಗಳಿಗೆ ಅನ್ನದಾನ ಹಾಗೂ ಲೋಬೋ ಫೌಂಡೇಶನ್ ವತಿಯಿಂದ ಒಲವಿನಹಳ್ಳಿ ಆಶ್ರಮದ‌ ಕಟ್ಟಡ ನಿರ್ಮಾಣಕ್ಕೆ ಒಂದು ಲಕ್ಷದ ದೇಣಿಗೆಯನ್ನು ನೀಡಿದರು.
ಆಶ್ರಮದ ಆಡಳಿತಾಧಿಕಾರಿ ಸಿಸ್ಟರ್ ಐಲೀನ್ ಮಾಥಿಯಾಸ್ ದೇಣಿಗೆಯನ್ನು ಸ್ವೀಕರಿಸಿದ ‌ ಮಾತನಾಡಿ ಜಾನ್ ವಿಲ್ಸನ್ ಲೋಬೋ ರಂತಹ ಸಮಾಜ ಸೇವಕರೇ ನಮ್ಮ ಆಶ್ರಮದ ದಾನಿಗಳಾಗಿದ್ದು ಅಸಹಾಯಕರ ಸೇವೆ ನಿತ್ಯ ನಿರಂತರವಾಗಿ ಈ ಆಶ್ರಮದಲ್ಲಿ ನಡೆಯುತ್ತಿರುವುದಕ್ಕೆ ಎಲ್ಲರ ಪ್ರೋತ್ಸಾಹ ಅಗತ್ಯ ಎಂದರು.

ಆಶ್ರಮದ ಸಿಸ್ಟರ್ ಮರಿಯಾಂಟೋನಿಯಾ ಥಾಮಸ್, ಸಿಸ್ಟರ್ ಗೇಬ್ರಿಯೆಲಾ ಫೆರ್ನಾಂಡಿಸ್, ಸಿಸ್ಟರ್ ಎಮ್ಮಾ ಜೋಸೆಫ್, ಸಿಸ್ಟರ್ ಆನಿ ಔಸೆಫ್, ಸಿಸ್ಟರ್ ಜೂಲಿಯಾನ ಅರಾನ್ಹಾ, ಸಿಸ್ಟರ್ ಡೆನ್ನಿ ಡಿಸೋಜಾ, ಸಿಸ್ಟರ್ ರೀಟಾ ಮಿಸ್ಕ್ವಿತ್, ಸಿಸ್ಟರ್ ಸುನೀತಾ ಮೊರಾಸ್, ವೇಳ್ ಘಡಿ ಕೊಂಕಣಿ ಚಲನಚಿತ್ರದ ಸಹ ನಿರ್ಮಾಪಕ ಆಲ್ವೀನ್ ಸಿಕ್ವೇರಾ ಮಂಗಳೂರು. ಸಹ ನಿರ್ದೇಶಕ ಹಾಗೂ ಬರಹಗಾರ ರೋಶನ್ ನೆಲ್ಲಿಗುಡ್ಡೆ. ಸಹ ನಿರ್ದೇಶಕಿ ಲವಿನಾ ಬೆಳ್ಮಣ್.ಚಿತ್ರದ ನಾಯಕಿ ಜಾಸ್ಲೀನ್ ನೊರೋನ್ಹಾ ಶಿರ್ವಾ. ಛಾಯಾಗ್ರಾಹಕರಾದ ಫೆಸ್ವಿತ್ ಮುಡಿಪು.ರಾಯನ್ ಮಂಗಳೂರು.ಕಲಾವಿದರಾದ ಜೆರೋಮ್ ಮೊರಾಸ್ ಮಂಗಳೂರು.ಲಿಯೋ ರಾಣಿಪುರ.ಮೊನಿಕಾ ಬೆಳ್ಮಣ್.ಲೋಯ್ ರೇಗೊ ಮಂಗಳೂರು.ಲೂಸಿ ಲೋಬೋ ಮಂಗಳೂರು. ಲೂವಿಸ್ ಪಿಂಟೋ ಕಟೀಲು. ಸುನಿಲ್ ನೆಲ್ಲಿಗುಡ್ಡೆ. ನರೇಂದ್ರ ಕೆರೆಕಾಡು. ಜಯಪ್ರಕಾಶ್ ಕೊಲ್ಯ, ವಿಲ್ಫ್ರೇಡ್ ಕೊಲ್ಲೂರು, ದಿವ್ಯಾ ನೊರೋನ್ಹಾ, ಉಮೇಶ್ ಬಂಟ್ವಾಳ ಉಪಸ್ಥಿತರಿದ್ದರು.
ಆಶ್ರಮದ ನಿವಾಸಿಗಳನ್ನು ಹಾಗೂ ವಿಶೇಷ ಸಂಗ್ರಹ ಕೊಠಡಿಯನ್ನು ವೀಕ್ಷಣೆ ನಡೆಸಿದರು‌.

SHARE
Loading spinner

Leave a Reply

Your email address will not be published. Required fields are marked *

error: Content is protected !!