ವೆನೆಜುವೆಲಾದಲ್ಲಿ ಮತ್ತೆ ಭೂಕಂಪ; ಮೃತರ ಸಂಖ್ಯೆ 920ಕ್ಕೆ ಏರಿಕೆ

ಕಾರಕಾಸ್: ದಕ್ಷಿಣ ಅಮೆರಿಕದ ವೆನೆಜುವೆಲಾದಲ್ಲಿ ಭೀಕರ ಅವಳಿ ಭೂಕಂಪಗಳ ಬೆನ್ನಲ್ಲೇ ಶುಕ್ರವಾರ 4.9 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದ್ದು, ಜನರಲ್ಲಿ ಆತಂಕ ಮತ್ತಷ್ಟು ಹೆಚ್ಚಿಸಿದೆ.

ಬುಧವಾರ ಸಂಭವಿಸಿದ್ದ 7.2 ಮತ್ತು 7.5 ತೀವ್ರತೆಯ ಭೂಕಂಪಗಳಿಂದ ಸಾವಿರಾರು ಮನೆಗಳು, ರಸ್ತೆ, ಸೇತುವೆಗಳು ಹಾಗೂ ಆಸ್ಪತ್ರೆಗಳು ಧ್ವಂಸಗೊಂಡಿವೆ. ಈವರೆಗೆ ಮೃತರ ಸಂಖ್ಯೆ 920ಕ್ಕೆ ಏರಿಕೆಯಾಗಿದ್ದು, 50 ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ವೆನೆಜುವೆಲಾ ರಾಷ್ಟ್ರೀಯ ಅಸೆಂಬ್ಲಿ ಅಧ್ಯಕ್ಷ ಜಾರ್ಜ್ ರೋಡ್ರಿಗಸ್ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ವಲಸೆ ಸಂಸ್ಥೆ (IOM) ಅಂದಾಜಿನಂತೆ ಸುಮಾರು 67.6 ಲಕ್ಷ ಜನರು ಈ ದುರಂತದಿಂದ ಬಾಧಿತರಾಗುವ ಸಾಧ್ಯತೆಯಿದೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ರಕ್ಷಣಾ ಕಾರ್ಯಾಚರಣೆಗೆ ತಜ್ಞರ ತಂಡಗಳನ್ನು ಕಳುಹಿಸಿದ್ದು, ಭಾರತವೂ ‘ಆಪರೇಷನ್ ಅಮಿಸ್ತಾದ್’ ಮೂಲಕ ಔಷಧಗಳು, ವೈದ್ಯಕೀಯ ಉಪಕರಣಗಳು ಹಾಗೂ 41 ಸದಸ್ಯರ ರಕ್ಷಣಾ ತಂಡವನ್ನು ವೆನೆಜುವೆಲಾಗೆ ರವಾನಿಸಿದೆ.

ಭೂಕಂಪ ಪೀಡಿತರಿಗೆ ಅಗತ್ಯವಿರುವ ಎಲ್ಲ ಮಾನವೀಯ ನೆರವನ್ನು ನೀಡಲು ಭಾರತ ಬದ್ಧವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!