ಕೆನರಾ ನಂದಗೋಕುಲದಲ್ಲಿ ತಂದೆಯಂದಿರ ದಿನಾಚರಣೆ

“ತಂದೆಯ ನೆರಳು ಮಗುವಿನ ಮೊದಲ ಭದ್ರತೆ, ತಂದೆಯ ಪ್ರೀತಿ ಮಗುವಿನ ಮೊದಲ ಶಕ್ತಿ.” ಈ ಅಮೂಲ್ಯ ಭಾವನೆಯನ್ನು ಸಾರುವ ಉದ್ದೇಶದಿಂದ ಕೆನರಾ ನಂದಗೋಕುಲ, ಕೊ ಡಿಯಾಲ್ ಬೈಲ್ ಹಾಗೂ ಅದರ ಶಾಖೆಯಾದ ಪದವಿನಂಗಡಿ ಸಂಸ್ಥೆಯು ಟಿ.ವಿ. ರಮಣ್ ಪೈ ಸಭಾಂಗಣದಲ್ಲಿ ತಂದೆಯಂದಿರ ದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದರು.


ಮಕ್ಕಳು ಮತ್ತು ತಂದೆಯಂದಿರು ಒಟ್ಟಾಗಿ ವಿವಿಧ ಮನೋರಂಜನಾತ್ಮಕ ಆಟಗಳಲ್ಲಿ ಉತ್ಸಾಹದಿಂದ ಭಾಗವಹಿಸಿ, ಕೇವಲ ಗೆಲುವಿನ ಸಂತೋಷವನ್ನಷ್ಟೇ ಅಲ್ಲದೆ, ಜೀವನಪರ್ಯಂತ ನೆನಪಿನಲ್ಲಿ ಉಳಿಯುವ ಅಮೂಲ್ಯ ಕ್ಷಣಗಳನ್ನು ಸೃಷ್ಟಿಸಿದರು. ಮಕ್ಕಳ ನಗುವಿನಲ್ಲಿ ತಂದೆಯ ಹೆಮ್ಮೆ, ತಂದೆಯ ಕಣ್ಣಿನಲ್ಲಿದ್ದ ವಾತ್ಸಲ್ಯ ಹಾಗೂ ಮಕ್ಕಳ ಕೈ ಹಿಡಿದ ಕ್ಷಣದಲ್ಲಿ ಅವರ ಬಾಂಧವ್ಯದ ಸೌಂದರ್ಯ ಎಲ್ಲರ ಮನಸ್ಸನ್ನೂ ಸ್ಪರ್ಶಿಸಿತು.
ಶಾಲೆಯ ಶೈಕ್ಷಣಿಕ ಮುಖ್ಯೋಪಾಧ್ಯಾಯಿನಿಯಾದ ಉಜ್ವಲ್ ಮಲ್ಯ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಮಕ್ಕಳ ಹಾಗೂ ಪೋಷಕರನ್ನು ಹೃತ್ಪೂರ್ವಕವಾಗಿ ಪ್ರೋತ್ಸಾಹಿಸಿ ಶುಭ ಹಾರೈಸಿದರು.


ಕಾರ್ಯಕ್ರಮವನ್ನು ನಯನಾ ನಿರೂಪಿಸಿದರು. ಅಪರ್ಣಾ ಅವರು “ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ತಂದೆಯ ಪಾತ್ರ” ಎಂಬ ವಿಷಯದ ಕುರಿತು ಭಾವಪೂರ್ಣವಾಗಿ ಮಾತನಾಡಿ, ತಂದೆಯ ಪ್ರೀತಿ, ಮಾರ್ಗದರ್ಶನ ಹಾಗೂ ಪ್ರೋತ್ಸಾಹವು ಮಗುವಿನ ವ್ಯಕ್ತಿತ್ವ ರೂಪಿಸುವಲ್ಲಿ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಮನಮುಟ್ಟುವಂತೆ ವಿವರಿಸಿದರು. ಅವಿಟಾ ಅವರು ವಂದನಾರ್ಪಣೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಮಾಪಿಸಿದರು.
ಈ ಕಾರ್ಯಕ್ರಮವು ತಂದೆ-ಮಕ್ಕಳ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವುದರೊಂದಿಗೆ, ಪ್ರೀತಿ, ಗೌರವ ಮತ್ತು ಆತ್ಮೀಯತೆಯ ಮಧುರ ನೆನಪುಗಳನ್ನು ಎಲ್ಲರ ಹೃದಯದಲ್ಲಿ ಅವಿಸ್ಮರಣೀಯವಾಗಿ ಮೂಡಿಬಂತು.

SHARE
Loading spinner

Leave a Reply

Your email address will not be published. Required fields are marked *

error: Content is protected !!