ಕಾಸರಗೋಡು :1930 ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಮಾಸಿಕ ಸಭೆಯು ಅಣoಗೂರು ಶ್ರೀ ಶಾರದಾಂಬ ಕಲ್ಯಾಣ ಮಂಟಪದಲ್ಲಿ ನಡೆಯಿತ್ತು . ಕಾಸರಗೋಡು ಯೋಜನಾಧಿಕಾರಿ ಶ್ರೀ ದಿನೇಶ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಕುತ್ಯಾಳ ನವಜೀವನ ಸಮಿತಿಯ ಅಧ್ಯಕ್ಷರಾದ ಶ್ರೀ ಉದಯ ಕುಮಾರ್ ಅಧ್ಯಕ್ಷ ಸ್ಥಾನ ವಹಿಸಿದರು.
ಈ ಸಂದರ್ಭದಲ್ಲಿ ಉಡುಪಿ ಪ್ರಾದೇಶಿಕ ವಿಭಾಗ ಜನಜಾಗೃತಿ ಯೋಜನಾಧಿಕಾರಿ ಶ್ರೀ ಗಣೇಶ ಆಚಾರ್ಯ , ಕಾಸರಗೋಡು ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ಶ್ರೀ ವೆಂಕಟ್ರಮಣ ಹೊಳ್ಳ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದಕ್ಷಿಣ ಕನ್ನಡ ಜಿಲ್ಲೆ ನಿರ್ದೇಶಕರದ ಶ್ರೀ ಬಾಬು ನಾಯಕ್ , ಕಾಸರಗೋಡು ವಲಯದ ಮೇಲ್ವಿಚಾರಕದ ಶ್ರೀ ಗೋಪಾಲಕೃಷ್ಣ , ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಯಕ್ಷ ಧ್ರುವ ಹೆಸರು ಖ್ಯಾತಿ ಪಡೆದ ಶ್ರೀ ಜಯರಾಮ ಪಾಟಾಳಿ , ವಲಯದ ಸೇವಾಪ್ರತಿನಿಧಿಗಳು , ನವಜೀವನ ಸಮಿತಿಯ ಎಲ್ಲಾ ಸದಾಸ್ಯರು , ಶ್ರೀ ಶಾರದಾಂಬ ಕಲ್ಯಾಣ ಮಂಟಪ ಅಣoಗೂರಿನ ಅಧ್ಯಕ್ಷರಾದ ಶ್ರೀ ಹರೀಶ್ ಅಣoಗೂರು ಹಾಗೂ ಸಮಿತಿಯ ಸದಾಸ್ಯರು , ಶೌರ್ಯ ವಿಪತ್ತು ನಿರ್ವಾಹಣ ಘಟಕದ ಕ್ಯಾಪ್ಟನ್ ರವೀಂದ್ರ ಅಣoಗೂರ್ , ಹಾಗೂ ಎಲ್ಲಾ ಸ್ವಯಂ ಸೇವಕರು ಉಪಸ್ಥಿತರಿದ್ದರು .
ಈ ಸಂದರ್ಭದಲ್ಲಿ ಹಲವು ಗಣ್ಯರನ್ನ ಸ್ಮರಣಿಕೆ ಕೊಟ್ಟು ಸನ್ಮಾನಿಸಲಾಯಿತ್ತು . ಈ ಕಾರ್ಯಕ್ರಮಕ್ಕೆ ಪೈವಳಿಕೆ ನವಜೀವನ ಸಮಿತಿಯ ಸದಾಸ್ಯರಾದ ಜಗನಾಥ ಸ್ವಾಗತಿಸಿ , ಕೂಡ್ಲು ಕಾರ್ಯ ಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ಜ್ಯೋತಿ ಮಾಯಿಪ್ಪಾಡಿ ವಂದಿಸಿದರು .