ಕುಡಾಲ್ಡ ಜವ್ವಣೆರ್ ವಾಟ್ಸಾಪ್ ಗ್ರೂಪಿನ ಆಶ್ರಯದಲ್ಲಿ ವಿದ್ಯಾಜ್ಯೋತಿ ಪ್ರತಿಭೋತ್ಸವ ಕಾರ್ಯಕ್ರಮವು ಗ್ರೂಪಿನ ಅಧ್ಯಕ್ಷರಾದ ಕುಡಾಲುಗುತ್ತು ಶ್ರೀ ಗಣೇಶ್ ರೈ ಮುಂಬಯಿಯವರ ಅಧ್ಯಕ್ಷತೆಯಲ್ಲಿ ಪೆರ್ಮುದೆಯ BPP ALP ಶಾಲೆಯಲ್ಲಿ ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಾಸರಗೋಡು ಜಿಲ್ಲಾ ಪಂಚಾಯತು ಸದಸ್ಯರಾದ ಶ್ರೀ ಸೋಮಶೇಖರ J.S ನೆರವೇರಿಸಿ ಮಾತನಾಡಿ ಸಾಮಾಜಿಕ ಜಾಲತಾಣದ ಮೂಲಕ ವಾಟ್ಸಾಪ್ ಗ್ರೂಪಿನ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.


ಮುಖ್ಯ ಅತಿಥಿಗಳಾಗಿ ಅಂಗಡಿ ಮೊಗರು ಸೇವಾ ಸಹಕಾರಿ ಬೇಂಕಿನ ಪೆರ್ಮುದೆ ಶಾಖೆಯ ಮೇನೆಜರ್ ಶ್ರೀರಾಮಚಂದ್ರ M ಶಿವಗಿರಿ, ಮುಂಬಯಿ ಉದ್ಯಮಿ ಶ್ರೀ ಹರೀಶ್ ಭಂಡಾರಿ ಶಿರಿಬಾಗಿಲು, ಹಿರಿಯ ರಂಗ ಕಲಾವಿದ ಪೆರ್ಮುದೆ ALP ಶಾಲೆಯ ಮುಖ್ಯ ಶಿಕ್ಷಕ ಶ್ರೀ ಸದಾಶಿವ ಬಾಲಮಿತ್ರ ‘ ಹಾಗೂ ಜನಪ್ರತಿನಿಧಿಗಳಾದ ಶ್ರೀಮತಿ ಶಶಿಕಲಾ ರವೀಂದ್ರ ರೈ ಜನಾಬ್ ಅಝೀಝ್ ಚೇವಾರು ಮೊದಲಾದವರ ಗೌರವ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ, ಗೌರವ ಡಾಕ್ಟರೇಟ್ ಪುರಸ್ಕೃತ ಸುಲ್ತಾನ್ ಜುವೆಲ್ಲರಿ ಗ್ರೂಪಿನ ಮಾಲಕರಾದ ಜನಾಬ್ ಡಾ ಅಬ್ದುಲ್ ರವೂಫ್, ಶ್ರೀದುರ್ಗಾಪರಮೇಶ್ವರೀ ವಿದ್ಯಾಸಂಸ್ಥೆಯ ಹೈಯರ್ ಸೆಕೆಂಡರಿ ವಿಭಾಗದ ಪ್ರಾಂಶುಪಾಲರಾಗಿ ನಿವೃತ್ತರಾದ ಶ್ರೀರಾಮಚಂದ್ರ ಭಟ್ ನೇರೋಳ್ ಮತ್ತು ಚೇವಾರು ಶ್ರೀ ಶಾರದಾ AUP ಶಾಲೆಯ ಮುಖ್ಯ ಶಿಕ್ಷಕರ ಹುದ್ದೆಯಿಂದ ನಿವೃತ್ತರಾದ ಶ್ರೀ ಶಾಮ್ ಭಟ್ ಮಾಸ್ಟರ್ ಮೊದಲಾದವರನ್ನು ಫಲಪುಷ್ಟ ಪುಸ್ತಕ ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಯಿತು. ಶ್ರೀ ಕುಡಾಲುಗುತ್ತು ಗಣೇಶ್ ರೈಯವರ ಪ್ತೆತ್ಯೇಕ ಅನುದಾನದೊಂದಿಗೆ ಪೆರ್ಮುದೆ BPP ALP ಶಾಲೆಯ ಮಕ್ಕಳಿಗಾಗಿ ಸ್ಪೋರ್ಟ್ಸ್ ಕಿಟ್ಟನ್ನು ಹಸ್ತಾಂತರಿಸಲಾಯಿತು.


ಕುಡಾಲು ಮೇರ್ಕಳ ಗ್ರಾಮದ ಒಟ್ಟು ಮೂವತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಸ್ಮರಣಿಕೆ ಪುಸ್ತಕ ಪೆನ್ನಿನೊಂದಿಗೆ ಸನ್ಮಾನಿಸಲಾಯಿತು.

ಶ್ರೀ ಅನಿಲ್ ಶೆಟ್ಟಿ BG ಯವರ ನಿರೂಪಣೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮಕ್ಕೆ ಗ್ರೂಪಿನ ಪ್ರಧಾನ ಎಡ್ಮಿನ್ ಶ್ರೀ ಶಿವಪ್ರಸಾದ್ ಶೆಟ್ಟಿ ಕುಡಾಲು ಸ್ವಾಗತಿಸಿ , ಶ್ರೀ ಸದಾಶಿವ ಭಂಡಾರಿಯವರು ವಂದನಾರ್ಪಣೆಯನ್ನು ನಡೆಸಿಕೊಟ್ಟರು.. ವಿದ್ಯಾರ್ಥಿಗಳ ಶೈಕ್ಷಣಿಕ ಯೋಜನೆಯ ಬಗ್ಗೆ CA ಮಣೀಷ್ ಶೆಟ್ಟಿಯವರು ಮಾಹಿತಿಯನ್ನು ಒದಗಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳ ಪರವಾಗಿ ನಮ್ಮ ಗ್ರೂಪಿನ BG ಶಮಿತಾಉದಯ್ ಶೆಟ್ಟಿಯವರ ಸುಪುತ್ರ ದೇವಾಂಶ್ ಶೆಟ್ಟಿಯವರ ಇಂಗ್ಲೀಷ್ ಭಾಷಣ ಹಾಗೂ ಕುಮಾರಿ ಪಲ್ಲವಿಯ ಕನ್ನಡ ಭಾಷಣ ಎಲ್ಲರ ಪ್ರಸಂಶೆಗೆ ಭಾಜನವಾಯಿತು.ಕಾರ್ಯಕ್ರಮಕ್ಕೆ ಅತ್ಯುತ್ತಮವಾದ ಪುಸ್ತಕ ಭಂಡಾರವನ್ನು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧೀಕಾರದ ಸದಸ್ಯರಾದ ಶ್ರೀ A.R ಸುಬ್ಬಯ ಕಟ್ಟೆಯವರು ಒದಗಿಸಿದರು.

ಬೆಳಕು ಧ್ವನಿ, ಮತ್ತು ಆಸನ, ವೇದಿಕೆಯ ವ್ಯವಸ್ಥೆಯನ್ನು ಸಂಪೂರ್ಣ ಸೇವಾರೂಪದಲ್ಲಿ ಒದಗಿಸಿದ ಲುಲು ಸೌಂಡ್ಸ್ & ಲೈಟಿಂಗ್ಸ್ ನ ಮಾಲಕ ಪೆರ್ಮುದೆ ಪೇಟೆಯ ಉದಯೋನ್ಮುಖ ಉದ್ಯಮಿ ಶ್ರೀ M. A ಅಲಿಯವರನ್ನು ಹಾಗೂ ಫೋಟೊ ವೀಡೀಯೋ ಯೂಟ್ಯೂಬ್ ಪ್ರಸಾರದ ಕಾರ್ಯವನ್ನು ಸೇವಾರೂಪದಲ್ಲಿ ನಿರ್ವಹಿಸಿದ ಶ್ರೀ ರಹೀಂ ARS ಹಾಗೂ ಮರುವಳ ಶ್ರೀ ಕೃಷ್ಣಭಟ್ಟರನ್ನು ವಿಶೇಷವಾಗಿ ಗೌರವಿಸಲಾಯಿತು. ಕಾರ್ಯಕ್ರಮದ ಯಶಸ್ಸಿನ ರೂವಾರಿಗಳಾಗಿ ದುಡಿದಂತ ಗ್ರೂಪಿನ ಕುಡಾಲುಗುತ್ತು ಮುಗೇರು ಶ್ರೀ ಶ್ರೀಧರ ಶೆಟ್ಟಿ, ಕುಡಾಲು ಭಂಡಾರಗುತ್ತು ಶ್ರೀಜಯರಾಮ ಶೆಟ್ಟಿ, ಶ್ರೀರಮೇಶ್ ಶೆಟ್ಟಿ, ಶ್ರೀ ಗಣೇಶ್ ಶೆಟ್ಟಿ, ಶ್ರೀ ದಿನೇಶ್ ರೈ BG ಹಾಗೂ ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದ ಎಲ್ಲ ವಿದ್ಯಾಭಿಮಾನಿಗಳಿಗೂ ಕೃತಜ್ಞತೆಯನ್ನು ಸಲ್ಲಿಸಲಾಯಿತು.

