ವರ್ಕಾಡಿ : ಪೆರ್ಮನಂಜಿ – ಮುಡಿಮಾರು ರಸ್ತೆ ಕಾಮಗಾರಿಗೆ ಚಾಲನೆ

ಜಿಲ್ಲಾ ಪಂಚಾಯತಿನಿಂದ 20 ಲಕ್ಷ ರೂ. ಮೊತ್ತದ ಕಾಮಗಾರಿ

ವರ್ಕಾಡಿ ಗ್ರಾಮ ಪಂಚಾಯತಿಯ ಬಹುಕಾಲದ ಜನತೆಯ ಕನಸಾಗಿದ್ದ ಪೆರ್ಮನಂಜಿ – ಮುಡಿಮಾರು ರಸ್ತೆ ಅಭಿವೃದ್ಧಿಗೆ ಮಹತ್ವದ ಹೆಜ್ಜೆ ಇಡಲಾಗಿದೆ. ಕಾಸರಗೋಡು ಜಿಲ್ಲಾ ಪಂಚಾಯತಿಯಿಂದ ಈ ರಸ್ತೆ ಕಾಮಗಾರಿಗೆ 20 ಲಕ್ಷ ರೂಪಾಯಿ ಮಂಜೂರಾಗಿದ್ದು, ಕಾಮಗಾರಿಯ ಉದ್ಘಾಟನೆ ಇಂದು ನೆರವೇರಿತು.

ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ ಅವರು ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಕಮಲಾಕ್ಷಿ ಕೆ. ಹಾಗೂ ವರ್ಕಾಡಿ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಮಾಲತಿ ಅವರು ಶುಭ ಹಾರೈಸಿ, ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಂಡು ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರಾದ ರಾಧಾ ಮಂಜಪ್ಪ ಶೆಟ್ಟಿ, ಅಬೂಬಕ್ಕರ್ ಪೊಯ್ಯೆ, ಡಿ. ಬೂಬ, ಗಂಗಾಧರ ಶೆಟ್ಟಿ, ಪದ್ಮನಾಭ ಅಡ್ಯಂತಾಯ, ಅರುಣ್ ಕುಮಾರ್ ಶೆಟ್ಟಿ, ರೋನಿ ಡಿಸೋಜಾ, ವಿನೋದ್ ಕುಮಾರ್, ನಾಗೇಶ್ ಬಳ್ಳೂರು, ಪಾವೂರು, ಜಯಪ್ರಕಾಶ್ ಅಡ್ಯಂತಾಯ ಹಾಗೂ ರಾಜೇಶ್ ಕಾನದಕಟ್ಟ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬಹುಕಾಲದ ಬೇಡಿಕೆಯಾಗಿದ್ದ ಈ ರಸ್ತೆ ಅಭಿವೃದ್ಧಿಯಿಂದ ಸ್ಥಳೀಯ ಜನರ ಸಂಚಾರ ಸುಗಮವಾಗಲಿದ್ದು, ಪ್ರದೇಶದ ಅಭಿವೃದ್ಧಿಗೂ ಹೊಸ ಚೈತನ್ಯ ದೊರೆಯಲಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!