ಪಡೀಲು ನಿವಾಸಿ, ಮಾಜಿ ಅಬಕಾರಿ ಉಪನಿರೀಕ್ಷಕ ಅಂಗಾರ ಪಿ ಇನ್ನಿಲ್ಲ

ಪುತ್ತೂರು: ಅಬಕಾರಿ ಇಲಾಖೆಯ ನಿವೃತ್ತ ಉಪನಿರೀಕ್ಷಕ ಪಡೀಲು ನಿವಾಸಿ ಅಂಗಾರ ಪಿ(65ವ) ಅವರು ಜು.24ರ ನಸುಕಿನ ಜಾವ ನಿಧನರಾದರು. ಪುತ್ತೂರು ಮೊಗೇರ ಸಂಘ, ಬನ್ನೂರು ನವೋದಯ ಯುವಕ ವೃಂದದ ಮಾಜಿ ಅಧ್ಯಕ್ಷರೂ, ಹಾಲಿ ಗೌರವಾಧ್ಯಕ್ಷರೂ ಆಗಿದ್ದ ಅಂಗಾರ ಪಿ ಅವರು ಕಾಂಗ್ರೆಸ್ ಪಡೀಲ್‌ಬೂತ್‌ನ ಅಧ್ಯಕ್ಷರಾಗಿಯೂ, ಪಡೀಲು ಸಾರ್ವಜನಿಕ ಕಟ್ಟೆಪೂಜೆ ಸಮಿತಿಯಲ್ಲೂ ಸಕ್ರಿಯರಾಗಿದ್ದರು.

ಪುತ್ತೂರು ಪೇಟೆಯ ಹೃದಯಭಾಗ ಚಿಕ್ಕಪುತ್ತೂರಿನಲ್ಲಿ ಭತ್ತಬೇಸಾಯ ಮಾಡುವ ಮೂಲಕ ಮಾದರಿ ಕೃಷಿಕರಾಗಿದ್ದರು. ವಾರದ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ಜು.24ರ ನಸುಕಿನ ಜಾವ ಮೃತಪಟ್ಟಿದ್ದಾರೆ. ಮೃತರು ಜೀವ ವಿಮಾ ನಿಗಮದ ನಿವೃತ್ತ ಸಿಬ್ಬಂದಿ ಪತ್ನಿ ಸುಂದರಿ, ಪುತ್ರ, ಪುತ್ರಿ, ಸಹೋದರ ನಿವೃತ್ತ ಎಸ್.ಐ ಐತ್ತಪ್ಪ ಅವರನ್ನು ಅಗಲಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!