ಶ್ರೀ ಪುತ್ತಿಗೆ ಮೂಲ ಮಠದಲ್ಲಿ ವಾರ್ಷಿಕ ಅಭಿಷೇಕ

ಉಡುಪಿ: ಉಡುಪಿ ಸಮೀಪದ ಹಿರಿಯಡ್ಕದ ಶ್ರೀ ಪುತ್ತಿಗೆ ಮೂಲ ಮಠದಲ್ಲಿ ವಾರ್ಷಿಕ ಅಭಿಷೇಕ ಮಹೋತ್ಸವವು ಭಕ್ತಿಭಾವದಿಂದ ನಡೆಯಿತು.
ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀಪಾದರು ಪಟ್ಟದ ದೇವರಿಗೆ ಪಂಚಾಮೃತ ಅಭಿಷೇಕ ನೆರವೇರಿಸಿ, ವಿಶೇಷ ಪೂಜೆ ಸಲ್ಲಿಸಿದರು.

ಅಭಿಷೇಕ ಮತ್ತು ಪೂಜಾ ವಿಧಿವಿಧಾನಗಳು ವೇದಘೋಷ ಹಾಗೂ ಧಾರ್ಮಿಕ ಸಂಪ್ರದಾಯಗಳಂತೆ ನೆರವೇರಿದವು. ಈ ಸಂದರ್ಭದಲ್ಲಿ ಮಠದ ಅರ್ಚಕರು, ಶಿಷ್ಯವೃಂದ ಹಾಗೂ ಭಕ್ತರು ಉಪಸ್ಥಿತರಿದ್ದು, ವಿಶೇಷ ಪೂಜೆಯಲ್ಲಿ ಭಾಗವಹಿಸಿ ದೇವರ ಅನುಗ್ರಹ ಪಡೆದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!