ನಿಟ್ಟೆ ಡಾ ll ಎನ್. ಎಸ್. ಎ. ಎಂ. ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್ ನ ಪದಗ್ರಹಣ ಸಮಾರಂಭ

ಡಾ ll ಎನ್. ಎಸ್. ಎನ್.ಎಸ್. ಎ. ಎಂ. ಕನ್ನಡ ಮಾಧ್ಯಮ ಪ್ರೌಢ ಶಾಲೆ ನಿಟ್ಟೆ ಹಾಗೂ ರೋಟರಿ ಕ್ಲಬ್ ನಿಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಇಂಟ ರಾಕ್ಟ್ ಕ್ಲಬ್ ನ ಪದಗ್ರಹಣ ಸಮಾರಂಭ ನೆರವೇರಿತು.

ನಿಟ್ಟೆ ರೋಟರಿ ಕ್ಲಬ್ ನ ನೂತನ ಅಧ್ಯಕ್ಷೆ ಹಾಗೂ NMAMIT ತಾಂತ್ರಿಕ ಮಹಾವಿದ್ಯಾಲಯದ ಲೆಕ್ಕ ವಿಭಾಗ ದ ಲೆಕ್ಕಧಿಕಾರಿ ರೊಟೇರಿಯನ್ ಶ್ರೀ ಮತಿ ಶೈಲಜಾ ವಿ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಪದ ಪ್ರದಾನ ಮಾಡಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.


ಇದೇ ಸಂದರ್ಭದಲ್ಲಿ ನಿಟ್ಟೆ ರೋಟರಿ ಕ್ಲಬ್ ನ ನೂತನ ಕಾರ್ಯಕ್ರಮದರ್ಶಿ ಹಾಗೂ NMAM I T ತಾಂತ್ರಿಕ ಮಹಾವಿದ್ಯಾಲಯ ದಯ ರೋಬೊಟಿಕ್ ವಿಭಾಗದ ಪ್ರೊಫೆಸರ್ ರೊಟೇರಿಯನ್ ಡಾll ದಿಲೀಪ್ ಕುಮಾರ್ ಹಾಗೂ ರೊಟೇರಿಯನ್ ಶ್ರೀ ರಾಘವೇಂದ್ರ ಕೆ ನಿಟ್ಟೆ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು.


2026-27 ಸಾಲಿನ ಶಾಲಾ ಇಂಟರಾಕ್ಟ್ ಕ್ಲಬ್ ನೂತನ ಪದಾಧಿಕಾರಿಗಳು
ಅಧ್ಯಕ್ಷರು : ಕುll ಮಾನ್ವಿ ಆಚಾರ್ಯ 10 ನೇ ತರಗತಿ,
ಉಪಾಧ್ಯಕ್ಷರು: ಕುll ಪೃಥ್ವಿ, 10ನೇ ತರಗತಿ,
ಕಾರ್ಯದರ್ಶಿ :ಧೀರಜ್ ಆಚಾರ್ಯ -9 ನೇ ತರಗತಿ,
ಜೊತೆ ಕಾರ್ಯದರ್ಶಿ : ಸಚಿನ್ 9 ನೇ ತರಗತಿ,ಹಾಗೂ ಕೋಶಾಧಿಕಾರಿಯಾಗಿ : ತನುಷಾ ಬಿ. ಶೆಟ್ಟಿ ಆಯ್ಕೆಗೊಂಡು ಪ್ರಮಾಣವಚನ ಸ್ವೀಕರಿಸಿದರು.
ಶಾಲಾ ಇಂಟರಾಕ್ಟ್ ಸಂಚಾಲಕರು ಹಾಗೂ ಹಿರಿಯ ಶಿಕ್ಷಕ ಚಂದ್ರ ನಾಯ್ಕ್ ಟಿ ಇವರು ಪ್ರಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನು ಸ್ವಾಗತಿಸಿದರು.

ಶಾಲಾ ಸಂಸತ್ತಿನ ನಾಯಕಿ ಕು ll ಯಶಶ್ವಿ ವೈ. ಆಚಾರ್ಯ ಹಾಗೂ ಶಾಲಾ ಶಿಕ್ಷಕವೃಂದ, ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.


ಶಾಲಾ ಶಿಕ್ಷಣ ಮಂತ್ರಿ ಕುll ಖ್ಯಾತಿ ಕಾರ್ಯಕ್ರಮ ನಿರೂಪಣೆ ಮಾಡಿದರು
ಕು ll ತನಿಷಾ ಬಿ. ಶೆಟ್ಟಿ ಪ್ರಾರ್ಥನೆ ಮಾಡಿದರು , ಕ್ಲಬ್ ನ ನೂತನ ಕಾರ್ಯದರ್ಶಿ ಧೀರಜ್ ಆಚಾರ್ಯ ಧನ್ಯವಾದ ಸಮರ್ಪಿಸಿದರು.
ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!